ಹಾವೇರಿ: 153 ವರದಿಗಳು ನೆಗೆಟಿವ್

Share

ಹಾವೇರಿ: ಜಿಲ್ಲೆಯಿಂದ ಪ್ರಯೋಗಾಲಯಕ್ಕೆ ಕಳುಹಿಸಿದ್ದ ಗಂಟಲು ದ್ರವದ ಮಾದರಿಗಳಲ್ಲಿ 153 ವರದಿಗಳು ಬುಧವಾರ ನೆಗೆಟಿವ್‌ ಎಂದು ಬಂದಿದ್ದು, ಇದುವರೆಗೆ ಜಿಲ್ಲೆಯಲ್ಲಿ 3 ಕೋವಿಡ್‌–19  ಸಕ್ರಿಯ ಪ್ರಕರಣಗಳು ಮಾತ್ರ ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ. 

ಹಾವೇರಿ ಜಿಲ್ಲೆಯ ಕೊರೊನಾ ಅಂಕಿ- ಅಂಶ (13-05-2020)
3297 ಇದುವರೆಗೆ ನಿಗಾದಲ್ಲಿರುವವರು
5 ಐಸೊಲೇಷನ್ ನಲ್ಲಿ ಇರುವವರು
3361 ಈವರೆಗೆ ಸಂಗ್ರಹಿಸಲಾದ ಗಂಟಲು ದ್ರವದ ಮಾದರಿಗಳು
3029 ನೆಗೆಟಿವ್ ಬಂದ ಮಾದರಿಗಳು
332 ಮಾದರಿಗಳ ಬಾಕಿ
181 ಬುಧವಾರ ಪ್ರಯೋಗಾಲಯಕ್ಕೆ ಕಳುಹಿಸಿದ ಮಾದರಿಗಳು
3 ಪಾಸಿಟಿವ್ ಪ್ರಕರಣ