24 ಗಂಟೆಯಲ್ಲಿ34 ಪ್ರಕರಣ|ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 959

Share

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ ಸಂಜೆ 5 ಗಂಟೆಯಿಂದ ಬುಧವಾರ ಸಂಜೆಯವರೆಗೆ 34 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ ಒಟ್ಟು ಸಂಖ್ಯೆ 959 ಕ್ಕೆ ಏರಿಕೆಯಾಗಿದೆ.

ಬುಧವಾರ ಬೆಳಗಾವಿ 5 ಜನ, ವಿಜಯಪುರದ 1, ಬೆಂಗಳೂರು ನಗರ 4, ದಕ್ಷಿಣ ಕನ್ನಡ 1, ಮಂಡ್ಯ 5, ಬಳ್ಳಾರಿ 1 ಹಾಗೂ ಬೀದರ್ 1 ಸೇರಿದಂತೆ ಒಟ್ಟು 18 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ರಾಜ್ಯದಲ್ಲಿ 451 ಜನರು ಚಿಕಿತ್ಸೆ ಪಡೆದು ಮನಗೆ ತೆರಳಿದ್ದಾರೆ. ರಾಜ್ಯದಲ್ಲಿ ದೃಢಪಟ್ಟ ಒಟ್ಟು 959 ಕೋವಿಡ್19 ಪೈಕಿ 33 ಜನರು ಮರಣ ಹೊಂದಿದ್ದಾರೆ.