ಹಾವೇರಿಯ ನಮ್ಮೂರ ಜಾತ್ರೆ ಜ.24ರಂದು

Share

ಹಾವೇರಿ: ನಗರದ ಹುಕ್ಕೇರಿಮಠದ ‘ನಮ್ಮೂರ ಜಾತ್ರೆ’ಯು ಶಿವಬಸವ ಶಿವಯೋಗಿಗಳ 75ನೇ ಹಾಗೂ ಶಿವಲಿಂಗ ಶಿವಯೋಗಿಗಳ 12ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಜ.24ರಂದು ನಡೆಯಲಿದೆ.

ಕೋವಿಡ್‌ ನಿಯಮ ಮಾರ್ಗ ಸೂಚಿಯಂತೆ ಸರಳವಾಗಿ ಹುಕ್ಕೇರಿಮಠದ ಆವರಣದಲ್ಲಿ ಆಚರಿ ಸಲಾಗುವುದು. ನಗರದಾದ್ಯಂತ ಜರುಗುವ ಪೂಜ್ಯದ್ವಯರ ಭಾವಚಿತ್ರದ ಮೆರವಣಿಗೆಯನ್ನು ರದ್ದುಪಡಿಸಲಾಗಿದೆ.

ಶಿವಬಸವ ಶಿವಯೋಗಿಗಳ 75ನೇ ಪುಣ್ಯಸ್ಮರಣೆಯ ಶುಭ ನೆನಪಿಗೆ ಪೂಜ್ಯರ ಜನ್ಮಸ್ಥಳ ಅಥಣಿ ತಾಲ್ಲೂಕಿನ ಸಪ್ತಸಾಗರದಿಂದ ‘ಶಿವಬಸವ ಜ್ಯೋತಿ’ಯನ್ನು ಜ.22ರಂದು ತರಲಾಗುವುದು. ಶ್ರೀಮಠದಲ್ಲಿ ಉಭಯ ಪೂಜ್ಯರ ಗದ್ದುಗೆ ದರ್ಶನ ಹಾಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.

ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು ಹಾಗೂ ಅಂತರ ಕಾಯ್ದುಕೊಳ್ಳಬೇಕು ಎಂದು ಶ್ರೀಮಠ ಪ್ರಕಟಣೆ ತಿಳಿಸಿದೆ.