ಮಧುರ “ಮಂಜುಳಾ”ಳ ಗಾನ ಭಜಾನಾ

Share

ಹಾವೇರಿ: ಪ್ರತಿಭೆ ಯಾರ ಮನೆಯ ಸೊತ್ತಲ್ಲ ಅದು ಸಾಧಕರ ಸೊತ್ತು. ಪ್ರತಿಭೆ ಗುಡಿಸಿಲಿನಲ್ಲಿ ಹುಟ್ಟುತ್ತೆ ಅರಮನೆಯಲ್ಲಿ ಸಾಯುತ್ತೆ ಅಂತಹ ಎಲೆಮರಿ ಕಾಯಿಯಂತೆ ಇರುವ ಪ್ರತಿಭೆಗಳಿಗೆ ಸಾಮಾಜಿಕ ಜಾಲತಾಣಗಳು ಉತ್ತಮ ವೇದಿಕೆಯಾಗಿವೆ‌ ಅನ್ನೋದಕ್ಕೆ ಉತ್ತಮ ಉದಾಹರಣೆ ತಾಲೂಕಿನ ನೆಗಳೂರ ಗ್ರಾಮದ ನಿವಾಸಿ ಮಂಜುಳಾ ಫಕ್ಕೀರೇಶ ಕೊಪ್ಪದ.

ಮಂಜುಳಾ ಅವರು ಪ್ರಾಥಮಿಕ ಶಾಲೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಗ್ರಾಮದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಜಾತ್ರಾಮಹೋತ್ಸವದಲ್ಲಿ ಹಾಡು ಹೇಳುವುದರ ಮೂಲಕ ಸಂಗೀತದ ಕಡೆಗೆ ಆಸಕ್ತಿ ಬೆಳಸಿಕೊಂಡಿದ್ದರಂತೆ ಮನೆಯಲ್ಲಿ ಬಡತನ ಹಿನ್ನಲೆಯಲ್ಲಿ ಪ್ರೌಢ ಶಿಕ್ಷಣಕ್ಕೆ ತಮ್ಮ ಶಿಕ್ಷಣವನ್ನು ನಿಲ್ಲಿಸಬೇಕಾಗಿ ಬಂತು ಎಂದರು. ಆದರೆ ಹಾಡುವುದನ್ನು ಮರೆಯಲಿಲ್ಲ. ಮನೆಯಲ್ಲಿದ್ದಾಗ ಕೆಲಸ ಮಾಡುವಾಗ ಹಾಡು ಹೇಳುತ್ತಿದ್ದೆ. ಮದುವೆಯಾದ ನಂತರ ಗಂಡನ ಮನೆಗೆ ಬಂದಾಗ ಇಲ್ಲಿಯೂ ಕೂಡ ಪತಿ ಪಕ್ಕಿರೇಶ ಅವರ ಪ್ರೋತ್ಸಾಹ ಸಹಕಾರ ದೊರಕಿತು.
ವರವಾದ ಬಿಸಿಊಟ ತಯಾರಿಕೆ ಸಹಾಯಕಿ ಹುದ್ದೆ: ಪತಿ ಕೂಲಿ ಕೆಲಸ ಕೃಷಿ ಚಟುವಟಿಕೆಗಳಿಂದ ಬಂದ ಹಣದಿಂದ ಸಂಸಾರದ ನೌಕೆ ಸಾಗಿಸಲು ಹರ ಸಹಾಸ ಪಡುತ್ತಿದ್ದರು. ಈಗ ಮೂರು ವರ್ಷಗಳಿಂದ ಗ್ರಾಮದ ಗಂಡುಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಕೆ ಸಹಾಯಕಿಯಾಗಿ ಸೇರಿಕೊಂಡ ನಂತರ ನೆಮ್ಮದಿಯ ಜೀವನ ನಡೆಸುವಂತಾಗಿದೆ
ಪ್ರತಿಭೆಗೆ ವರವಾದ ಸಾಮಾಜಿಕ ಜಾಲತಾಣ: ಮಂಜುಳಾರವರು ಕೇವಲ ಮನೆ ಹಾಗೂ ಶಾಲೆಯಲ್ಲಿ ಬಿಡುವಿನ ವೇಳೆಯಲ್ಲಿ ಸುಶ್ರಾವ್ಯವಾಗಿ ಹಾಡುತ್ತಿದ್ದರಂತೆ ಈ ಹಾಡುಗಳನ್ನು ಮದ್ರಣಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸವಂತೆ ಆತ್ಮೀಯರೊಬ್ಬರು ಹೇಳಿದಾಗ ಮೊಬೈಲ್ ತೆಗೆದುಕೊಂಡು ಅದನ್ನು ಯಾವ ರೀತಿ ಬಳಕೆ ಮಾಡಲು ಕಲಿತ ಮಂಜುಳಾ ತಾನು ಹಾಡಿದ ಹಾಡುಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆದಾಗ ಲಕ್ಷಾಂತರ ವೀಕ್ಷಷರು ಹುಟ್ಟಿಕೊಳ್ಳುವಂತೆ ಮಾಡಿತು. ಅದರಲ್ಲಿಯೂ ಪುಲ್ವಾಮಾ ದಾಳಿ ನಡೆದಾಗ ಭಾರತೀಯ ಸೈನಿಕರ ಕುರಿತು ಹಾಗೂ ನನ್ನ ಗೆಳೆಯ ಸ್ವರಚಿತವಾಗಿ ಬರೆದು ಹಾಡಿದ ಹಾಡು 70 ಲಕ್ಷ ಅಧಿಕ ಜನರಿಂದ ವೀಕ್ಷಣೆ ಮಾಡಿ ಒಳ್ಳೇಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಸಮಾನ ಮನಸ್ಕ ತಂಡದೊಂದಿಗೆ ಗುರುಶಾಂತೇಶ್ವರ ಮೆಲೋಡಿಸ್ ಎಂಬ ತಂಡವನ್ನು ಕಳೆದ ಮೂರು ತಿಂಗಳಿಂದ ಕಟ್ಟಿಕೊಂಡು ಗ್ರಾಮ ನಗರ ಪಟ್ಟಣಗಳಲ್ಲಿ ಜರಗುವ ಮದುವೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದ್ದಾರೆ.
” ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆಯಾದ ಜೀ ಕನ್ನಡ ವಾಹಿನಿಯ ಸರಿಗಮಪ ಅಥವಾ ಕಲರ್ಸ ಕನ್ನಡ ವಾಹಿನಿಯ ಕನ್ನಡ ಕೋಗಿಲೆಯಲ್ಲಿ ಭಾಗವಹಿಸುವ ಹಂಬಲವಿದೆ ಜೊತೆಗೆ ಗ್ರಾಮದ ಮಕ್ಕಳಿಗೆ ಸಂಗೀತ ಕಲಿಸಬೆಕೆಂಬ ಆಶಯ ನನ್ನದಾಗಿದೆ
ಮಂಜುಳಾ ಫಕ್ಕಿರೇಶ.ಕೊಪ್ಪದ

ಅವಳುಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಪರಣಿತಿ ಹೊಂದಿ ಉತ್ತಮ ಗಾಯಕಿಯಾಗಿ ನಮ್ಮ ಮನೆಗೂ ನಮ್ಮ ಗ್ರಾಮಕ್ಕೆ ಹೆಸರು ತರುವಂತಾಗಲಿ ಅದಕ್ಕೆ ಸಂಪೂರ್ಣ ಸಹಕಾರ ಮತ್ತು ಪ್ರೋತ್ಸಾಹ ನೀಡುತ್ತೇನೆ
ಫಕ್ಕಿರೇಶ ಕೊಪ್ಪದ ಮಂಜುಳಾ ಪತಿ
ಒಟ್ಟಾರೆಯಾಗಿ ಹಾವೇರಿ ಜಿಲ್ಲೆಯಲ್ಲಿ ಇಂತಹ ಎಲೆ ಮರೆಯ ಕಾಯಿಯಂತಿರುವ ಪ್ರತಿಭೆಗಳಿಗೆ ಬರವಿಲ್ಲ ಅವುಗಳನ್ನು ಮುಖ್ಯ ವಾಹಿನಿಗೆ ತರುವಂತಹ ಕಾರ್ಯವಾಗಬೇಕಿದೆ. ಮುಂದಿನ ದಿನಗಳಲ್ಲಿ ಅಂತಹ ಉತ್ತಮವಾದ ವೇದಿಕೆ ಮಂಜುಳಾಳಿಗೆ ಸಿಗಲಿ ಎಂಬುದು ನಮ್ಮ ಆಶಯ.

ವರದಿ: ಗುರುಶಾಂತಸ್ವಾಮಿ ಹಿರೇಮಠ, ನೆಗಳೂರ