ಭಾನುವಾರ ನಗರದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ

Share

ಹಾವೇರಿ: ನಗರದ 110 ಕೆ.ವ್ಹಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಹುಕ್ಕೇರಿಮಠ 11 ಕೆವಿ ಮಾರ್ಗದಲ್ಲಿ ವಿದ್ಯುತ್ತ ಟ್ರಾನ್ಸಫಾರ್ಮ ಬದಲಾಯಿಸುವ ಕಾಮಗಾರಿ ಇರುವುದರಿಂದ ದಿನಾಂಕ ಅಗಸ್ಟ್ 25 ರಂದು ರವಿವಾರ ಹಾವೇರಿ ನಗರದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ನಗರದ ದಾನೇಶ್ವರಿ ನಗರ, ಬದಾಮಿ ನಗರ, ತಾಜ ನಗರ, ಕಾಗಿನೆಲೆ ರೋಡ, ರಾಜೇಂದ್ರ ನಗರ, ಆನಿ ಹೋಂಡಾ, ವೀರಭದ್ರೇಶ್ವರ ನಗರ, ಪೆಟ್ರೋಲ್ ಬಂಕ್ ಪ್ರದೇಶಗಳಲ್ಲಿ ವಿದ್ಯುತ್ತ ಸರಬರಾಜಿನಲ್ಲಿ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ವ್ಯತ್ಯಯವಾಗುವುದು ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.