ಬನಶಂಕರಿದೇವಿ ಜಾತ್ರೆ ಫೆ. 05 ರಂದು

Share

ಹಾವೇರಿ: ಇಲ್ಲಿಯ ಶಿವಲಿಂಗ ನಗರದ ಬನಶಂಕರಿದೇವಿಯ 17ನೇ ಜಾತ್ರಾ ಮಹೋತ್ಸವ ಫೆ.05 ರಂದು ನಡೆಯಲಿದೆ. ಕೋವಿಡ್‌ ನಿಯಮದ ಮಾರ್ಗ ಸೂಚಿಯಂತೆ ಸರಳವಾಗಿ ದೇವಸ್ಥಾನದ ಆವರಣದಲ್ಲಿ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳನ್ನು ಆಚರಿಸಲಾಗುವುದು. ನಗರದಾದ್ಯಂತ ಜರುಗುವ ದೇವಿಯ ಭಾವಚಿತ್ರದ ಮೆರವಣಿಗೆ ಹಾಗೂ ಅನ್ನಸಂತರ್ಪಣೆಯನ್ನು ರದ್ದುಪಡಿಸಲಾಗಿದೆ.

ಬನಶಂಕರಿದೇವಿ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ

ಜಾತ್ರಾ ಮಹೋತ್ಸವದ ಹಿನ್ನೆಲೆ ದೇವಿಯ ದರ್ಶನ, ಪಾಲಿಕೆ ಸೇವೆ ಹಾಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು ಹಾಗೂ ಅಂತರ ಕಾಯ್ದುಕೊಳ್ಳಬೇಕು ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.