ನಿಲ್ಲದ ಮಳೆ, ನೀರು ಪಾಲದ ಶೇಂಗಾ ಬೆಳೆ

Share

ಹಾವೇರಿ: ಕಳೆದ ಎರಡು ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ನೆಗಳೂರ ಗ್ರಾಮದ ಬಹುತೇಕ ಹೊಲಗಳು ಸಂಪೂರ್ಣ ಜಲಾವೃತಗೊಂಡು ಬೆಳೆದ ಬೆಳೆಗಳಾದ ಶೇಂಗಾ, ಈರುಳ್ಳಿ, ಮೆಕ್ಕೆಜೋಳ ನೀರು ಪಾಲಾಗಿವೆ.

ಗ್ರಾಮದ ಶಿವನಗೌಡ ಬಿಷ್ಟನಗೌಡ್ರ ತಮ್ಮ ಮೂರುಎಕರೆ ಜಮೀನನಲ್ಲಿ ಶೇಂಗಾ ಬೆಳೆದಿದ್ದು ಇನ್ನೇನು ಕಟಾವು ಮಾಡಲು ಮುಂದಾಗಬೇಕೆನ್ನುವಷ್ಟರಲ್ಲಿ ಬುಧವಾರ ಸುರಿದ ಮಳೆಯಿಂದಾಗಿ ಶೇಂಗಾ ಬೆಳೆ ಸಂಪೂರ್ಣ ನೀರು ಪಾಲಾಗಿದೆ. ಇನ್ನೇನು ಬರುವಷ್ಟು ಬರಲಿ ಎಂದು ಜಲಾವೃತಗೊಂಡ ಜಮೀನನಲ್ಲಿಯೇ ಶೇಂಗಾ ಬೆಳೆ ಕಟಾವಿಗೆ ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರೈತರು ಹಿಂದೆದೂ ಈ ತರಹದ ಮಳೆಯನ್ನೇ ನಾವು ನೋಡಿರಲಿಲ್ಲ ಈ ಮಳೆಯಿಂದಾಗಿ ರೈತರು ತಾವು ಬೆಳೆದ ಬೆಳೆಗಳನ್ನು ಪಡೆಯುವುದಕ್ಕೂ ಆಗದೆ ಇತ್ತ ಬಿತ್ತನೆಗಾಗಿ ಮಾಡಿದ ಸಾಲ ತೀರಿಸುವುದಕ್ಕಾಗದೇ ಪರದಾಡುತ್ತಿದ್ದಾರೆ.

ರಾಜ್ಯದಲ್ಲಿ ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಬಹುಬೇಗನೆ ಬೆಳೆವಿಮೆ ಬೆಳೆಹಾನಿ ಪರಿಹಾರ ನೀಡಿ ರೈತರ ಬದುಕಿಗೆ ದಾರಿದೀಪವಾಗಲಿ ಎಂದು ರೈತ ಸಂಘದ ಉಪಾದ್ಯಕ್ಷ ಹನುಮಂತಗೌಡ ಬಿಷ್ಟನಗೌಡ್ರ ಆಹ್ರಹಿಸಿದರು.

ವರದಿ: ಗುರುಶಾಂತಸ್ವಾಮಿ ಹಿರೇಮಠ, ನೆಗಳೂರ