ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವಲ್ಲಿ ತಾಯಂದಿರ ಪಾತ್ರ ಮಹತ್ವದ್ದು: ಈರಣ್ಣ ಲಮಾಣಿ

Share

ಹಾವೇರಿ: ತೊಟ್ಟಿಲನ್ನು ತೂಗುವ ಕೈ ಜಗತ್ತನೆ ತೂಗಬಲ್ಲದು ಎನ್ನುವ ನಾನ್ನುಡಿಯಂತೆ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದ್ದು,ಈ ದಿಶೆಯಲ್ಲಿ ಭಾರತಿಯ ಸಂಸ್ಕ್ರತಿ ಹಾಗೂ ಪರಂಪರೆಯನ್ನು ತಾಯಂದಿರು ತಮ್ಮ ಮಕ್ಕಳಲ್ಲಿ ಬೆಳಸಬೇಕೆಂದು ಕನ್ನಡ ವಿಷಯ ಪರಿವಿಕ್ಷಕ ಈರಣ್ಣ ಲಮಾಣಿ ಹೇಳಿದರು.

ನಗರದ ಭಕ್ತಿಭಂಡಾರಿ ಬಸವೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ತಾಯಂದಿರ ಸಭೆ ಹಾಗೂ ತಾಯಂದಿರ ಪಾದ ಪೂಜೆ ಮಾಡಿಸುವ ವಿನುತನ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉಧ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಶೋಭಾ ಮಾಗಾವಿ, ಬಿಬಿ ಬೆಳಗಾವಿ, ಸೀತಾ ಕಡಕೋಳ್ ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಎಸ್.ಎಸ್ ಹಳ್ಳೆಪ್ಪನವರ ಅಧ್ಯಕ್ಷತೆವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ರಂಗೋಲಿಯಲ್ಲಿ ರಚಿಸಿದ ಗಣಿತ, ವಿಜ್ಞಾನ, ಹಿಂದಿ ಹಾಗೂ ಸಮಾಜವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಚಿತ್ರಗಳು ಗಮನ ಸೆಳೆದವು. ವಾಯ್.ಎಫ್ ಲಿಂಗನಗೌಡ್ರ ನಿರೂಪಿಸಿದರು. ಸಭೆಯಲ್ಲಿ ಶಾಲಾ ಶಿಕ್ಷಕರು ಸೇರಿದಂತೆ ಇತರರು ಇದ್ದರು.