ಡಿ.20 ರಂದು ಶರಣ ಸಂಸ್ಕೃತಿ ಉತ್ಸವ: ಬಸವಶಾಂತಲಿಂಗ ಶ್ರೀ

Share

ಹಾವೇರಿ: ‘ಈ ಬಾರಿಯ ಶರಣ ಸಂಸ್ಕೃತಿ ಉತ್ಸವವನ್ನು ಕೋವಿಡ್ ಹಿನ್ನಲೆಯಲ್ಲಿ ಒಂದು ದಿನಕ್ಕೆ ಸೀಮಿತಗೊಳಿಸಿ ಸರ್ಕಾರದ ಮಾರ್ಗಸೂಚಿಯ ಅನುಸಾರ ಡಿ.20 ರ ಭಾನುವಾರ ನಗರದ ಹೊಸಮಠ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಹೊಸಮಠದ ಬಸವಶಾಂತಲಿಂಗ ಶ್ರೀ ಹೇಳಿದರು.

ನಗರದ ಬಸವಕೇಂದ್ರ ಹೊಸಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒತ್ತಡದ ಜೀವನದಲ್ಲಿ ಒತ್ತಡ ನಿವಾರಣೆಗೆ ಜ್ಞಾನ- ಶಿವಯೋಗ ಅಗತ್ಯವಿದೆ. ಶಿವಯೋಗದಿಂದ ಜ್ಞಾನ ಲಭ್ಯವಾಗುತ್ತದೆ. ಒತ್ತಡದಿಂದ ಮುಕ್ತವಾಗಲು ಸಹಜ ಶಿವಯೋಗವನ್ನು , ಪ್ರಾತ್ಯಕ್ಷಿಕೆಯನ್ನು ಜ.ಮುರುಘರಾಜೇಂದ್ರ ಬೃಹನ್ಮಠ, ಚಿತ್ರದುರ್ಗದ ತ್ರಿವಿಧ ದಾಸೋಹಿಗಳು, ಶೂನ್ಯಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು ಅಂದು ಬೆಳಿಗ್ಗೆ 7.30ಕ್ಕೆ ನಡೆಸಿಕೊಡುವರು. ಸಮ್ಮುಖವನ್ನು ಹೋತನಹಳ್ಳಿಯ ಸಿದ್ಧಾರೂಮಠದ ಶಂಕರಾನಂದ ಸ್ವಾಮಿಗಳು, ದಾವಣಗೆರೆಯ ವಿರಕ್ತಮಠದ ಬಸವಪ್ರಭುಸ್ವಾಮಿಗಳು ವಹಿಸುವರು, ಮುಖ್ಯಅತಿಥಿಗಳಾಗಿ ಡಾ.ಎಸ್.ಎನ್.ನಿಡಗುಂದಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಬಿ.ಕೆ.ಮೋಹನಕುಮಾರ, ಲಲಿತಾ ಹಿರೇಮಠ ಆಗಮಿಸುವರು ಎಂದರು.

ಅಂದು ಬೆಳಿಗ್ಗೆ 10:30ಕ್ಕೆ ಕಾಗಿನೆಲೆ ರಸ್ತೆಗೆ ಹೊಂದಿಕೊಂಡಿರುವ ಮುರುಗಿಸ್ವಾಮಿ ಮಠದಲ್ಲಿ ಬಸವತತ್ವ ಧ್ವಜಾರೋಹಣವನ್ನು ಹುಕ್ಕೇರಿಮಠದ ಸದಾಶಿವಸ್ವಾಮಿಜಿ ನೆರವೇರಿಸುವರು. ಸಾನಿಧ್ಯವನ್ನು ಡಾ.ಶಿವಮೂರ್ತಿ ಮುರುಘಾಶರಣರು ವಹಿಸುವರು.

ಸಂಜೆ ಹೊಸಮಠದ ಆವರಣದಲ್ಲಿ ವಿಚಾರಕೂಟ ವಿಚಾರ ಸಂಕಿರಣ 21ನೇ ಶತಮಾನಕ್ಕೆ ಬಸವತತ್ವ ಹಾಗೂ ಡಾ.ಶಿಮೂಶ ಪ್ರಶಸ್ತಿ ಪ್ರದಾನ ಸಮಾರಂಭ ಚಿತ್ರದುರ್ಗದ ತ್ರಿವಿಧ ದಾಸೋಹಿಗಳು, ಶೂನ್ಯಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರ ಸಾನಿಧ್ಯದಲ್ಲಿ ಜರುಗುವುದು. ಸಮ್ಮುಖವನ್ನು ಸವಣೂರಿನ ದೊಡ್ಡಹುಣಸೆಕಲ್ಮಠದ ಚನ್ನಬಸವ ಶ್ರೀ ವಹಿಸುವರು, ನೇತೃತ್ವವನ್ನು ಹೊಸಮಠದ ಚರಮೂರ್ತಿಗಳಾದ ಬಸವಶಾಂತಲಿಂಗ ಶ್ರೀ ವಹಿಸುವರು, ಡಾ.ಶಿಮೂಶ ಪ್ರಶಸ್ತಿಯನ್ನು ವಿಶ್ರಾಂತ ಕುಲಪತಿ ಹಾಗೂ ಸಾಹಿತ್ಯ ಚಿಂತಕ ಪ್ರೊ.ಮಲ್ಲೇಪುರಂ ವೆಂಕಟೇಶವ ಅವರಿಗೆ ಪ್ರದಾನ ಮಾಡಲಾಗುವುದು. ಸಾಹಿತಿ ರಂಜಾನ ದರ್ಗಾ ವಿಷಯ ಮಂಡನೆ ಮಾಡುವರು ಎಂದು ಹೇಳಿದರು.

ಮುಖ್ಯಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕ ನೆಹರು ಓಲೇಕಾರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಕೆ.ಎಂ.ಎಫ್.ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಆಗಮಿಸಲಿದ್ದಾರೆ ಎಂದು ವಿವರಿಸಿದರು.

ನಾಗೇಂದ್ರ ಕಟಕೋಳ, ಜಿ.ಪಂ.ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ಚಂದ್ರಶೇಖರ ಶಿಶುವಿನಹಳ್ಳಿ, ಮರುಗೇಪ್ಪ ತೆಂಬದ ಮತ್ತಿತರರು ಇದ್ದರು.