ಜುಲೈ 27 ರಂದು ಹಾವೇರಿಯಲ್ಲಿ ವಿದ್ಯುತ್ ವ್ಯತ್ಯಯ

Share

ಹಾವೇರಿ: ನಗರದ 110 ಕೆ.ವ್ಹಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಭಾರತಿ ನಗರ, ಹುಕ್ಕೇರಿಮಠ ಹಾಗೂ ಸುಭಾಸ್ ಸರ್ಕಲ್ 11 ಕೆವಿ ಮಾರ್ಗಗಳಲ್ಲಿ ಜುಲೈ 27ರ ಶನಿವಾರ ತುರ್ತು ನಿರ್ವಹಣಾ ಕಾಮಗಾರಿ ಜರುಗಲಿದೆ.
ಸದರಿ ದಿನದಂದು ಹಾನಗಲ್ ರೋಡ್, ಭಾರತಿ ನಗರ, ಶ್ರೀಕಂಠಪ್ಪ ಬಡಾವಣೆ, ಅಶ್ವಿನಿ ನಗರ, ಶಿವಾಜಿ ನಗರ, ಹಳೇ ಪಿ.ಬಿ ರೋಡ್, ದಾನೇಶ್ವರಿ ನಗರ, ಎಮ್.ಜಿ.ರೋಡ್, ಎಲ್.ಬಿ.ಎಸ್.ಮಾರ್ಕೆಟ್, ಮಕಾನಗಲ್ಲಿ, ಶಿವಲಿಂಗ ನಗರ, ರಾಣೇಬೆನ್ನೂರು ರೋಡ, ಅಕ್ಕಿಪೇಟೆ, ವಿದ್ಯಾನಗರ, ಸುಭಾಸ್ ಸರ್ಕಲ್, ಶಿವಬಸವ ನಗರ, ಶಿವಯೋಗಿಶ್ವರ ನಗರ, ರೇಲ್ವೆ ಸ್ಟೇಶನ್ ರೋಡ್, ಮುನಿಸಿಪಲ್ ಹೈಸ್ಕೂಲ್ ರೋಡ್, ಬಸವೇಶ್ವರ ನಗರ, ಮುಲ್ಲಾನಕೇರಿ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಬೆಳಿಗ್ಗೆ 10 ರಿಂದ ಸಾಯಂಕಾಲ 5-30 ರ ವರೆಗೆ ವ್ಯತ್ಯಯವಾಗುವುದು. ಸಾರ್ವಜನಿಕರು ಹಾಗೂ ಸದರಿ ಫೀಡರನ ವ್ಯಾಪ್ತಿಗೆ ಬರುವ ಎಲ್ಲ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಕಾರ್ಯ ಮತ್ತು ಪಾಲನೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜನೀಯರ್ ತಿಳಿಸಿದ್ದಾರೆ.