ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ: ಎಸ್.ಸಿ. ಪೀರಜಾದೆ

Share

ಹಾವೇರಿ : ವಿದ್ಯಾರ್ಥಿಗಳು ಉತ್ತಮ ಗುರಿ, ಕಠಿಣ ಪರಿಶ್ರಮ ಮೂಲಕ ಸಾಧನೆ ಮಾಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರ ಹೊಮ್ಮಬೇಕಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಸಿ. ಪೀರಜಾದೆ ಹೇಳಿದರು.

ನಗರದ ಹೊಸಮಠದ ಬಸವೇಶ್ವರ ಸಮುದಾಯ ಭವನದಲ್ಲಿ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ವಿದ್ಯಾರ್ಥಿ ಒಕ್ಕೂಟ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್‍ನ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಂದೆ-ತಾಯಿಗಳು ನೂರಾರು ಆಸೆ, ಕನಸ್ಸುಗಳನ್ನು ಕಟ್ಟಿಕೊಂಡು ಮಕ್ಕಳು ಕಾಲೇಜ್‍ಗಳಿಗೆ ಕಳಿಸುತ್ತಾರೆ. ಆದರೆ ಅವರ ಆಸೆ, ಕನಸ್ಸುಗಳನ್ನು ಈಡೇರಿಸುವ ಕೆಲಸ ವಿದ್ಯಾರ್ಥಿಗಳು ಮಾಡಬೇಕಾಗಿದೆ ಎಂದರು. ತಂದೆ -ತಾಯಿಗಳಿಗೆ ಪ್ರೀತಿ ಗೌರವ ಶಿಕ್ಷಕರಿಗೆ, ಸಮಾಜಕ್ಕೆ ಪ್ರತಿಯೊಬ್ಬರು ಗೌರವ ಕೊಡಬೇಕು. ಜೀವನದಲ್ಲಿ ತತ್ವಸಿದ್ಧಾಂತಗಳು ಅಳವಡಿಸಿಕೊಂಡರೆ ಸಾಧನೆ ಮಾಡಲು ಸಾಧ್ಯ ಎಂದರು.


ಕಾಲೇಜ್ ಪ್ರಾಚಾರ್ಯ ಪಿ.ಬಿ. ವಿಜಯಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಹೂ ಕೊಡುವ ಮೂಲಕ ಸ್ವಾಗತಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಒಕ್ಕೂಟದ ಪ್ರತಿನಿಗಳಿಗೆ ಪ್ರತಿಜ್ಞಾವಿಧಿ ಬೋಸಲಾಯಿತು.


ಹೊಸಮಠದ ಬಸವಶಾಂತಲಿಂಗ ಶ್ರೀ ಸಾನಿಧ್ಯ ವಹಿಸಿದ್ದರು. ಡಾ. ಅಂಬಿಕಾ ಹಂಚಾಟೆ, ಪ್ರಾಚಾರ್ಯ ಪ್ರೋ. ಬಿ.ಟಿ. ಲಮಾಣಿ, ನಾಗೇಂದ್ರ ಕಟಕೋಳ, ರಾಜೇಂದ್ರ ಸಜ್ಜನ, ಮಾಜಿ ನಿವೃತ್ತ ಸೈನಿಕ ಶಿಶುವಿನಾಳ ಸೇರಿದಂತೆ ಕಾಲೇಜ್‍ನ ಉಪನ್ಯಾಸಕರು ವಿದ್ಯಾರ್ಥಿಗಳು ಇದ್ದರು.