ಅ.23 ರಂದು ಚನ್ನಮ್ಮಳ 341ನೇ ಜಯಂತಿ ಆಚರಣೆ

Share

ಹಾವೇರಿ: ಕಿತ್ತೂರ ರಾಣಿ ಚನ್ನಮ್ಮಳ 341ನೇ ಜಯಂತಿಯನ್ನು ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಅ.23 ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಜಿಲ್ಲಾ ಘಟಕದ ಗೌರವಾಧ್ಯಕ್ಷ ಪಿ.ಡಿ.ಶಿರೂರ ಅವರು ಹೇಳಿದರು.

ನಗರದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನೆರೆಯಿಂದ ಸಾಕಷ್ಟು ಹಾನಿಯಾಗಿದ್ದು, ಈ ಸಂದರ್ಭದಲ್ಲಿ ಸಮಾಜದ ಸಂಘಗಳು ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣವನ್ನು ನೀಡಿದ್ದೇವೆ. ಅದರಂತೆ ಸಮಾಜದ ಜಯಂತಿಯನ್ನೂ ಅದ್ದೂರಿಯಾಗಿ ಆಚರಣೆ ಮಾಡುತ್ತೇವೆ. ಉಳಿದ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗುತ್ತದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಬೆಳ್ಳಿಗ್ಗೆ 10: 30ಕ್ಕೆ ನಗರದ ವೀರಭದ್ರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಡಲಿದ್ದು, ಮಹಿಳಾ ವೀರಗಾಸೆ, ಜಾಂಜ್ ಮೇಳ, ಸಮಾಳೆ, ಶಿವಾಜಿನಗರದ ನಾಗರಿಕರಿಂದ ಚನ್ನಮ್ಮಳ ಸ್ತಬ್ಧ ಚಿತ್ರ, ಕುದುರೆ ಮೇಲೆ ಚೆನ್ನಮ್ಮ ವೇಷಧಾರಿ ಹಾಗೂ ಕುಂಭ ಮೆರವಣಿಗೆ ಮಾಡಲಾಗುತ್ತದೆ ಎಂದು ಹೇಳಿದರು.

ಮುಂಖಡರಾದ ಎಸ್.ಆರ್. ಅಂಗಡಿ, ಭುವನೇಶ್ವರ ಶಿಡ್ಲಾಪುರ, ವಿ.ಜಿ. ಬಣಕಾರ, ಸಂತೋಷ ಕೊಟ್ರಪ್ಪನವರ, ಕೆ. ನಾಗೇಂದ್ರ, ಶಂಕರಗೌಡ ಪಾಟೀಲ, ಚೆನ್ನಮ್ಮ ಬ್ಯಾಡಗಿ ಸೇರಿದಂತೆ ಇತರರು ಇದ್ದರು.