ಲಾಕ್ ಡೌನ್ ಉಲ್ಲಂಘನೆ: ಸಾಮೂಹಿಕ ಪ್ರಾರ್ಥನೆಗೆ ಮುಂದಾದ ಜನರಿಗೆ ಲಾಠಿ ಬಿಸಿ

Share

ಸವಣೂರ: ಲಾಲ್ ಡೌನ್ ನಡುವೆಯೂ ಸಾಮೂಹಿಕ ಪ್ರಾರ್ಥನೆಗೆ ಮುಂದಾದ 30ಕ್ಕೂ ಹೆಚ್ಚು ಮುಸ್ಲಿಂ ಸಮುದಾಯದವರಿಗೆ ಪೋಲಿಸ್ ಇಲಾಖೆ ಲಾಠಿ ಬಿಸಿ ಮುಟ್ಟಿಸಿದ ಘಟನೆ ಪಟ್ಟಣದ ಶುಕ್ರವಾರ ಪೇಟೆಯ ಜುಮ್ಮಾ ಮಸೀದಿಯಲ್ಲಿ ಶುಕ್ರವಾರ ನಡೆದಿದೆ.

ಗುರುವಾರ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನವರ ನಗರದ ಎಲ್ಲ ಮಸೀದಿಯ ಮುಖ್ಯಸ್ಥರಿಗೆ ಸಭೆ ಏರ್ಪಡಿಸಿ, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಕೈಗೊಳ್ಳಬೇಡಿ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರೂ ಅವರ ಮಾತನ್ನು ಕಡೆಗಣಿಸಿ ಸಾಮೂಹಿಕ ಪ್ರಾರ್ಥನೆಗೆ ಅವರು ಮುಂದಾಗಿದ್ದರು.

ಖಚಿತ ಮಾಹಿತಿ ಆಧಾರದ ಮೇಲೆ ಸಿಬ್ಬಂದಿಗಳೊಂದಿಗೆ ಜುಮ್ಮಾ ಮಸೀದಿಗೆ ಭೇಟಿ ನೀಡಿದ ತಹಶೀಲ್ದಾರ, ಮುಖ್ಯಸ್ಥ ರಾಜಅಹ್ಮದಖಾನ ಪಠಾಣಗೆ ನೀತಿ ಪಾಠ ಮಾಡಿ, ಪೋಲಿಸರಿಗೆ ಸ್ಥಳಕ್ಕಾಗಮಿಸುವಂತೆ ಸೂಚನೆ ನೀಡಿ ಲಾಠಿ ರುಚಿ ತೋರಿಸಲು ಆದೇಶಿಸಿದ ಹಿನ್ನೆಲೆಯಲ್ಲಿ ಪೋಲಿಸರು ಲಾಟಿ ಚಾರ್ಜ ಮಾಡಿ, ಮಸೀದಿಯಲ್ಲಿ ನೆರೆದಿದ್ದ ಜನರನ್ನು ಚದುರಿಸಿದರು.

ಮಸೀದಿ ಮುಖ್ಯಸ್ಥ ರಾಜ ಅಹ್ಮದಖಾನ ಪಠಾಣ ಪುನಃ ಈ ರೀತಿ ಸಾಮೂಹಿಕ ಪ್ರಾಥನೆ ಮಾಡುವುದಿಲ್ಲ. ಸರ್ಕಾರದ ಆದೇಶ ಉಲ್ಲಂಘಿಸಿ ತಪ್ಪು ಮಾಡಿದ್ದೇವೆ ಎಂದು ತಹಶೀಲ್ದಾರರಿಗೆ ಕ್ಷಮೆಯಾಚಿಸಿದರು.

ಜುಮ್ಮಾ ಮಸೀದಿಗೆ ಶುಕ್ರವಾರ ಭೇಟಿ ನೀಡಿದ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನವರ

ಪ್ರತಿಕ್ರಯಿಸಿದ ತಹಶೀಲ್ದಾರ ಮುಖ್ಯಸ್ಥರಾಗಿ ಪದೇ ಪದೇ ಕಾನೂನು ಉಲ್ಲಂಘಿಸುತ್ತಿದ್ದೀರಿ. ನಾವು ನಿಮ್ಮ ಆರೋಗ್ಯ ರಕ್ಷಣೆ ಕುರಿತು ಕಾರ್ಯನಿರವಹಿಸುತ್ತಿದ್ದೇವೆ ಸಭೆ ಕರೆದು ಹಲವಾರಿ ಬಾರಿ ತಿಳಿಸಿದರೂ ಸಹ ಕಡೆಗಣಿಸಿ ಪ್ರಾರ್ಥನೆ ಮಾಡುತ್ತಿದ್ದೀರೆಂದ ತರಾಟೆಗೆ ತೆಗೆದುಕೊಂಡರು. ಘಟನೆ ಕುರಿತು ಇಲ್ಲಿನ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿ ತಿಳಿದ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಆಗಮಸಿ ಪರಿಶೀಲಿಸಿದರು.

ವರದಿ: ನಿಂಗನಗೌಡ ಪಾಟೀಲ, ಸವಣೂರು