29 ರಿಂದ ದಿಂಡಿ ಉತ್ಸವ

Share

ಹಾವೇರಿ: ಶಿಗ್ಗಾವಿ ತಾಲೂಕಿನ ಹಳೇಬಂಕಾಪುರ ಗ್ರಾಮದ ವಿಠ್ಠಲ ಹರಿ ಮಂದಿರದಲ್ಲಿ ಸಂತ ಆದಿಶಕ್ತಿ ಮುಕ್ತಿಬಾಯಿ ಪುಣ್ಯ ಸ್ಮರಣೆ ನಿಮಿತ್ಯ ದ್ವಿತೀಯ ದಿಂಡಿ ಉತ್ಸವ ಮೇ 29 ರಿಂದ 31ರವರೆಗೆ ಜರುಗಲಿದೆ.
ಮೇ 29 ರಂದು ಪೋತಿ ಸ್ಥಾಪನೆ, 30 ರಂದು ಕಾಕಡ ಆರತಿ ನಂತರ ಪಂಡರಪುರ ಮಹಾರಾಜ ಪ್ರಭಾಕರ್ ದಾದಾ ಬೋಧಲೆ ಅವರಿಂದ ಕೀರ್ತನೆ, ಜಾಗರಣೆ ಹಾಗೂ ಭಾರೂಢ ಕಾರ್ಯಕ್ರಮ ನಡೆಯುವುದು.
31ರ ಶುಕ್ರವಾರ ಬೆಳಿಗ್ಗೆ ದಿಂಡಿ ಸೋಹಿಳಾ ಹಾಗೂ ಕುಂಭದ ಜೊತೆಗೆ ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮ ಪ್ರದಕ್ಷಣೆ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ.