ಬಿಜೆಪಿ ತೆಕ್ಕೆಗೆ ಶಿಗ್ಗಾಂವಿ ಪುರಸಭೆ

Share

ಹಾವೇರಿ: ಜಿಲ್ಲೆಯ ಶಿಗ್ಗಾಂವಿ ಪುರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿ ಪಕ್ಷದ ಶ್ರೀಕಾಂತ ಬುಳ್ಳಕ್ಕನವರ ಹಾಗೂ ಉಪಾಧ್ಯಕ್ಷರಾಗಿ ಮಂಜುನಾಥ ಬ್ಯಾಹಟ್ಟಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ 8 ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ಗೆಲುವು ಸಾಧಿಸಿತು‌. ಒಟ್ಟು ಶಿಗ್ಗಾಂವಿ ಪುರಸಭೆ 23 ಸದಸ್ಯ ಬಲ ಹೊಂದಿದ್ದು, 9 ಬಿಜೆಪಿ, 08 ಪಕ್ಷೇತರ ಹಾಗೂ 6 ಕಾಂಗ್ರೆಸ್ ಸದಸ್ಯರು ಇದ್ದಾರೆ. ಅಧ್ಯಕ್ಷ ಸ್ಥಾನದ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಬುಳ್ಳಕ್ಕನವರ 17 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದರೆ, ಮಂಜುನಾಥ ಬ್ಯಾಹಟ್ಟಿ ಅವಿರೋಧವಾಗಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು‌. ತಹಶಿಲ್ದಾರ ಪ್ರಕಾಶ ಕುದುರಿ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಾಹಿಸಿದರು.