ಉಪ ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ, ಮದ್ಯಪಾನ ನಿಷೇಧ

Share

ಹಾವೇರಿ: ಜಿಲ್ಲೆಯ ಹಿರೇಕೆರೂರು ಹಾಗೂ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಡಿಸೆಂಬರ್ 3ರ ಸಂಜೆ 6 ರಿಂದ ಮತದಾನ ದಿನ ಡಿಸೆಂಬರ್ 5ರ ರಾತ್ರಿ 12 ಗಂಟೆವರೆಗೆ ಹಾಗೂ ಮತ ಎಣಿಕೆ ದಿನ ಡಿಸೆಂಬರ್ 9 ರ ಬೆಳಿಗ್ಗೆ 6 ರಿಂದ ರಾತ್ರಿ 12 ಗಂಟೆವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಹಾಗೂ ಮದ್ಯಪಾನ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೃಷ್ಣ ಬಾಜಪೇಯಿ ಅವರು ಆದೇಶ ಹೊಡಿಸಿದ್ದಾರೆ.

ಈ ಮೇಲ್ಕಂಡ ದಿನಗಳಂದು ಬಿಯರ್ ಬಾರಗಳನ್ನು, ಕ್ಲಬ್‍ಗಳನ್ನು ಮತ್ತು ಮದ್ಯದ ಡಿಪೋಗಳನ್ನು(ಏSಃಅಐ) ಮುಚ್ಚಲು ಸಹ ಆದೇಶಿಸಲಾಗಿದೆ. ಸದರಿ ದಿವಸಗಳನ್ನು ಶುಷ್ಕ (ಡ್ರೈ ಡೇಸ್) ದಿವಸಗಳೆಂದು ಘೋಷಿಸಲಾಗಿದೆ.