ಬಾಲಕಿ ಮೇಲೆ ಬಾಲಕ ಅತ್ಯಾಚಾರ

Share

ರಾಣೆಬೆನ್ನೂರು: ನಗರದ 4 ವರ್ಷದ ಬಾಲಕಿ ಮೇಲೆ 13 ವರ್ಷದ ಬಾಲಕ ಶನಿವಾರ ಅತ್ಯಾಚಾರ ನಡೆಸಿದ್ದಾನೆ.

ಆರೋಪಿ ಬಾಲಕ ಮೂಲತಃ ಹಿರೇಕೆರೂರು ತಾಲೂಕಿನವನಾಗಿದ್ದು, ನಗರದ ಅಜ್ಜಿ ಮನೆಯಲ್ಲಿ ವಾಸವಾಗಿದ್ದ. ಡಿ.12 ರಂದು ತನ್ನ ಸಂಬಂಧಿಕರ 4 ವರ್ಷದ ಬಾಲಕಿ ಮೇಲೆ ಅತ್ಯಚಾರ ಎಸಗಿದ್ದಾನೆ.

ಆರೋಪಿಯನ್ನು ಬಾಲಮಂದಿರಕ್ಕೆ ಕಳುಹಿಸಲಾಗಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.