ದೇಶ ವಿರೋಧಿಗಳಿಂದ ನಾನು ಹತನಾದರೆ ನನ್ನ ಪಾಲಕರಿಗೆ ಕರೆ ಮಾಡಿ ಧೈರ್ಯ ಹೇಳಿ: ಚಕ್ರವರ್ತಿ ಸೂಲಿಬೆಲೆ

Share

ಹಾವೇರಿ: ಎಸ್.ಡಿ.ಪಿ.ಐ ಸಂಘಟನೆಯಲ್ಲಿ ಕೊಲೆ ಮಾಡುವ ಕಾರ್ಯ ಅವರ ರಕ್ತದಲ್ಲೇ ಸೇರಿದ್ದು, ಅವರ ಬೇದರಿಕೆಗೆ ಹೇದರುವವ ನಾನಲ್ಲ. ಒಂದು ವೇಳೆ ದೇಶ ವಿರೋಧಿಗಳಿಂದ ನಾನು ಹತನಾದರೆ ನನ್ನ ಪಾಲಕರಿಗೆ ಕರೆ ಮಾಡಿ ಧೈರ್ಯ ಹೇಳಿ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರನ್ನು ಎದುರಿಸುವುದು ನಮ್ಮಗೇನು ಹೊಸದಲ್ಲ ನಾನು ಹೆದರಲ್ಲ. ಇದು ದೇಶದ ರಕ್ಷಣಾ ಸ್ಥಿತಿಯನ್ನು ಅಸ್ಥಿರ ಗೋಳಿಸಲು ಮುಂದಾಗಿತ್ತು, ಎಸ್ ಡಿ ಪಿ ಐ ಮೋದಿಯನ್ನು ವೀಕ್ ಮಾಡುವ ಉನ್ನಾರ ಅವರದಾಗಿತ್ತು ಅದು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಐಸಿಸ್ ಗೆ ಬೇಕಾಗುವ ಟ್ರೈನಿಂಗ್ ಗಳ ಮಾಡುತ್ತಿದ್ದಾರೆ ಎಂದರು.

ನನಗೆ ಹೆಮ್ಮೆ ಅನಿಸುತ್ತಿದೆ, ದೇಶದ್ರೋಹಿಗಳು, ದೇಶ ವಿರೋಧಿಗಳು ನನ್ನ ಟಾರ್ಗೆಟ್ ಮಾಡಿದ್ದಾರೆ ಎಂಬುದು.ಅಂದಿನ ಘಟನೆಯನ್ನು ಪೊಲೀಸ್ ಕಮಿಷನರ್ ಗೆ ತಿಳಿಸಿದ್ದೆ. ಸೂಕ್ಷ್ಮವಾಗಿ ಎಚ್ಚರಿಕೆ ತೆಗೆದುಕೊಂಡ ಪರಿಣಾಮ, ಇಂದು ಆರು ಜನ ಸಿಕ್ಕಿದ್ದಾರೆ. ಅವರು ದೇಶವನ್ನು ಅಸ್ಥರಗೊಳಿಸಿ, ತುಂಡು ಮಾಡಬೇಕು ಎಂದು ಬಯಸುತ್ತಿರೋ ಜನ. ಕೊಲೆಯನ್ನ ರಕ್ತದೊಳಗೆ ಹರಡಿಕೊಂಡಿರೋ ಜನ ಎಂದು ಕಿಡಿಕಾರಿದರು.

ದೇಶದಲ್ಲಿ ಶಾಂತಿಯನ್ನು ತೆಗೆದುಕೊಂಡು ಹೋಗುವಂತದ್ದು ಹಿಂದೂ ಸಮಾಜ. ಸರಕಾರ ಅವರನ್ನು ಸೂಕ್ತವಾಗಿ ವಿಚಾರಿಸಿಕೊಳ್ಳಬೇಕು. ಎಸ್ ಡಿ ಪಿಐ ದೇಶದಲ್ಲಿ, ಕರ್ನಾಟಕದಲ್ಲಿ ಐಸಿಸ್ ನಂತಹ ಉಗ್ರ ಸಂಘಟನೆ ನಿರ್ಮಾಣ ಮಾಡಬೇಕು.ಅವರಿಗೆ ಅಡ್ಡಗಾಲು ಆಗಿದ್ದೇವೆ. ನಾವು ಅವರಿಗೆ ಅಡ್ಡವಾಗಿ ಕೊನೆವರೆಗೂ ನಿಲ್ಲುತ್ತೇವೆ. ಅವರ ಕನಸ್ಸುಗಳು ಈಡೇರದಂತೆ ಅಡ್ಡಿಯಾಗ್ತಿವಿ. ಯಾವ ಎಸ್ಡಿಪಿಐ ಯೋಜನೆಗಳು ನಮ್ಮನ್ನು ವಿಚಲಿತಗೊಳಿಸಲಾರವು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು .

ನನಗೆ ಗಾಬರಿಯಾಗಿದೆ ಎಂದರೆ ನಮ್ಮ ಅಪ್ಪ, ಅಮ್ಮನ ಯೋಚನೆ. ನಮ್ಮ ಅಕ್ಕನಿಗೆ ಕಲ್ಲು ಬಿದ್ದ ವಿಚಾರ ಹೇಳಿದ್ದೆ. ಅಪ್ಪ,ಅಮ್ಮಗೆ ಹೇಳಿರಲಿಲ್ಲಾ. ಕೊನೆ ಉಸಿರು ಇರೋವರೆಗೂ ನಾನು ಹೇಗೆ ಸತ್ತರು ರಾಷ್ಟ್ಟಕ್ಕಾಗಿ ಸಾಯ್ತಿನಿ, ಹೆದರಬೇಕಾಗಿಲ್ಲಾ, ನಮ್ಮ ಅಪ್ಪ ಅಮ್ಮಗೆ ಕರೆ ಮಾಡಿ ಧೈರ್ಯ ತುಂಬಿ. ಕಲ್ಲು ಬಿದ್ದಾಗ ರಕ್ಷಣೆ ಕೋರಲಿಲ್ಲಾ ಆದರೆ ಪೊಲೀಸ್​​ ಕಮಿಷನರ್ ಗನ್ ಮ್ಯಾನ್ ಕೊಡುವುದಾಗಿ ಹೇಳಿದ್ದಾರೆ. ಅವರ ನಿರ್ಧಾರಕ್ಕೆ ಬದ್ಧ, ರಕ್ಷಣೆಗಾಗಿ ನಾನು ಯಾವ ಅರ್ಜಿಯನ್ನು ಹಾಕೋದೊಲ್ಲಾ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು .