ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸಿಸಿಬಿ ದಾಳಿ

Share

ಬೆಂಗಳೂರು, ಜುಲೈ10: ನಗರದ ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ಶನಿವಾರ ನಸುಕಿನಲ್ಲಿ ದಿಢೀರ್ ದಾಳಿ ಮಾಡಿದರು.

ಕಾರಾಗೃಹದಲ್ಲಿರುವ ಕೈದಿಗಳು ಮೊಬೈಲ್ ಬಳಸುತ್ತಿದ್ದಾರೆ. ಅಲ್ಲಿಂದಲೇ ಅಪರಾಧ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಹಾಗೂ ಮಾದಕ ವಸ್ತು ಸೇವಿಸುತ್ತಿದ್ದ ಖಚಿತ ಮಾಹಿತಿ ಇತ್ತು.

ಅದೇ ಕಾರಣಕ್ಕೆ ಸಿಸಿಬಿ ವಿಶೇಷ ತಂಡಗಳು, ಜೈಲಿನೊಳಗೆ ದಾಳಿ ಮಾಡಿ ಎಲ್ಲ ಬ್ಯಾರಕ್‌ಗಳಲ್ಲಿ ತಪಾಸಣೆ ನಡೆಸಿದವು. ಮೊಬೈಲ್‌ಗಳು, ಸಿಮ್ ಕಾರ್ಡ್‌ಗಳು, ಗಾಂಜಾ, ಚಾಕು ಸೇರಿದಂತೆ ಹಲವು ವಸ್ತುಗಳು ಕೈದಿಗಳ ಬಳಿ ಸಿಕ್ಕಿವೆ.

ಹೊರಗಿನಿಂದ ಮಾದಕ ವಸ್ತು ಜೈಲಿನೊಳಗೆ ಪೂರೈಕೆ ಆಗುತ್ತಿರುವುದು ಗೊತ್ತಾಗಿದೆ. ಈ ಬಗ್ಗೆ ಜೈಲು ಸಿಬ್ಬಂದಿಯನ್ನು ವಿಚಾರಣೆ ನಡೆಸಬೇಕಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.