ಜುಲೈ 15 ರಿಂದ ದ್ವಿತೀಯ ಪಿಯುಸಿ ಆನ್​ಲೈನ್​ ತರಗತಿ ಆರಂಭ

Share

ಬೆಂಗಳೂರು, ಜುಲೈ 14: ದ್ವಿತೀಯ ಪಿಯುಸಿ ಶೈಕ್ಷಣಿಕ ವರ್ಷವು ಜುಲೈ 15 ರಿಂದ ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಪೂರ್ಣ ಪ್ರಮಾಣದ ತರಗತಿಗಳನ್ನು ನಡೆಸಬೇಕೆಂದು ಪಿಯು ಬೋರ್ಡ್ ಆದೇಶ ಹೊರಡಿಸಿದೆ.

ಕಳೆದ ವರ್ಷದಲ್ಲಿ ಫ್ರೀ ರೆಕಾರ್ಡಿಂಗ್ ಯೂಟ್ಯೂಬ್ ತರಗತಿಗಳನ್ನು ನಡೆಸಲಾಗಿತ್ತು. ಈ ಲಿಂಕ್​ಗಳನ್ನು ವಿದ್ಯಾರ್ಥಿಗಳಿಗೆ ವಾಟ್ಸಪ್​ ಗ್ರೂಪ್​ಗಳ ಮೂಲಕ ಕಳುಹಿಸಲಾಗುತಿತ್ತು. ಆದರೆ ಈ ಬಾರಿ ಪ್ರತಿ ಕಾಲೇಜಿನ ಉಪನ್ಯಾಸಕರೇ, ಅವರ ವಿದ್ಯಾರ್ಥಿಗಳಿಗೆ ಆನ್​ಲೈನ್​ ತರಗತಿಗಳನ್ನು ನಡೆಸಬೇಕು.

ಉಪನ್ಯಾಸಕರು ಕಡ್ಡಾಯವಾಗಿ ಪಾಠಗಳನ್ನು ನಡೆಸಿ, ಹಾಜರಾತಿಯನ್ನು ತೆಗೆದುಕೊಳ್ಳಬೇಕು. ಪ್ರತಿದಿನದ ಹಾಜರಾತಿ ಮಾಹಿತಿಯನ್ನು ಕಾಲೇಜು ಪ್ರಾಂಶುಪಾಲರಿಗೆ ಕಳುಹಿಸಬೇಕು. ಯಾವುದೇ ಕಾಲೇಜಿನಲ್ಲಿ ಉಪನ್ಯಾಸಕರು ಇಲ್ಲದಿದ್ದಲ್ಲಿ, ಈ ವಿದ್ಯಾರ್ಥಿಗಳನ್ನು ಹತ್ತಿರದ ಕಾಲೇಜಿನ ಉಪನ್ಯಾಸಕರ ತರಗತಿಗೆ ಸೇರ್ಪಡೆಯಾಗಬೇಕೆಂದು ಇಲಾಖೆ ತಿಳಿಸಿದೆ.

ದ್ವಿತೀಯ ಪಿಯುಸಿ ಆನ್​ಲೈನ್ ವೇಳಾಪಟ್ಟಿ

ಬೆಳಗ್ಗೆ 10.00-11.00 ರವರೆಗೆ ಮೊದಲ ಅವಧಿ
ಬೆಳಗ್ಗೆ 11.00- 12.00 ರವರೆಗೆ ಎರಡನೇ ಆವಧಿ
12.00- 12:30 ರವರೆಗೆ ವಿರಾಮ 12.30- 01:30 ರವರೆಗೆ ಮೂರನೇ ಅವಧಿ 01.30 – 02.30 ರವರೆಗೆ – ನಾಲ್ಕನೇ ಅವಧಿ