ವೈದ್ಯಕೀಯ ಸೌಲಭ್ಯ ಸದುಪಯೋಗವಾಗಲಿ: ಜಗದೀಶ ಶೆಟ್ಟರ್

Share

ಧಾರವಾಡ, ಜೂನ್ 7: ಸಾರ್ವಜನಿಕರು ಕರೊನಾ ನಿಯಂತ್ರಣಕ್ಕಾಗಿ ಸಹಕಾರ ನೀಡಲು ಮುಂದಾಗಬೇಕಿದೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಕುಂದಗೋಳ ಮತ್ತು ಕಲಘಟಗಿ ತಾಲೂಕು ಆಸ್ಪತ್ರೆ ಆವರಣದಲ್ಲಿ ಎಂಆರ್​ಪಿಎಲ್ ಕಂಪನಿಯ ಸಹಾಯದಿಂದ 500 ಲೀಟರ್ ಉತ್ಪಾದಿಸುವ ಆಮ್ಲಜನಕ ಘಟಕಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪಟ್ಟಣದ ತಾಲೂಕು ಆಸ್ಪತ್ರೆ ಹಾಗೂ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಿಲ್ಲ. ಎಲ್ಲೆಡೆ ವೈದ್ಯರು ಹಾಗೂ ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಲ್ಲದೆ, ವೈದ್ಯಕೀಯ ಸೇವಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅವುಗಳ ಸದುಪಯೋಗವಾಗಬೇಕಿದೆ ಎಂದು ಹೇಳಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಸಿ.ಎಂ. ನಿಂಬಣ್ಣವರ, ಜಿಲ್ಲಾಧಿಕಾರಿ ನಿತೇಶಕುಮಾರ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಪಪಂ ಅಧ್ಯಕ್ಷೆ ಅನಸೂಯಾ ಹೆಬ್ಬಳ್ಳಿಮಠ, ತಹಸೀಲ್ದಾರ್ ಅಶೋಕ ಶಿಗ್ಗಾಂವಿ, ಪಪಂ ಮುಖ್ಯಾಧಿಕಾರಿ ವೈ.ಎನ್. ಗದ್ದಿಗೌಡರ, ಪ್ರೊಬೇಶನರಿ ತಹಸೀಲ್ದಾರ್ ಕೆ.ಆರ್. ಪಾಟೀಲ ಇತರರಿದ್ದರು.

ಕುಂದಗೋಳ ಕಾರ್ಯಕ್ರಮದಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಶಾಸಕ ಎಸ್. ಐ. ಚಿಕ್ಕನಗೌಡ್ರ, ಬಿಜೆಪಿ ಮುಖಂಡ ಎಂ.ಆರ್. ಪಾಟೀಲ, ಬಿಜೆಪಿ ತಾಲೂಕಾಧ್ಯಕ್ಷ ರವಿಗೌಡ ಪಾಟೀಲ, ಪಪಂ ಅಧ್ಯಕ್ಷ ವಾಸು ಗಂಗಾಯಿ ಇತರರಿದ್ದರು.