ಸಂಕಷ್ಟದಲ್ಲಿರುವ 260 ಛಾಯಾಗ್ರಾಹಕರಿಗೆ ಫುಡ್ ಕಿಟ್ ವಿತರಣೆ

Share

ಹುಬ್ಬಳ್ಳಿ, ಜೂನ 12: ವಿವೇಕ್ ನಾಯಕ ಮತ್ತು ಪ್ರಕಾಶ್ ಕನ್ನೂರ  ಅವರ ಸಹಕಾರದಿಂದ ಇಂದು ನಗರದ 260 ಛಾಯಾಗ್ರಾಹಕರಿಗೆ ಫುಡ್ ಕಿಟ್ ವಿತರಣೆ ಮಾಡಲು ವ್ಯವಸ್ಥೆ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಹುಬ್ಬಳ್ಳಿಯ ಫೋಟೋ ಹಾಗೂ ವಿಡಿಯೋಗ್ರಾಫರ್ ಅಸೋಸಿಯೇಷನ್ ಬೇಡಿಕೆ ಮೇರೆಗೆ  ಇಂದು ನಗರದ ಮೂರುಸಾವಿರ ಮಠದ ಆವರಣದಲ್ಲಿ ಛಾಯಾಗ್ರಾಹಕರಿಗೆ ಫುಡ್ ಕಿಟ್ ವಿತರಿಸಿ ಮಾತನಾಡಿದರು.

ಕೊರೋನಾ ಸಂಕಷ್ಟದ ಕಾಲದಲ್ಲಿ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿರುವ ಛಾಯಾ ಗ್ರಾಹಕರಿಗೆ ಫುಡ್ ಕಿಟ್ ನೀಡುವ ಅವರ ಯೋಚನೆ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೊರೋನಾ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆಯೇ ಹೊರತು ಸಂಪೂರ್ಣವಾಗಿ ಹೋಗಿಲ್ಲ, ಹೀಗಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಕಿರಣ್ ಬಾಕಳೆ, ಪ್ರಕಾಶ್ ಕೊನ್ನೂರ್,  ಲಿಂಗರಾಜ್ ಪಾಟೀಲ್ , ದಿನೇಶ್ ದಾಬಡೆ, ಖಜಾಂಚಿ ಅನಿಲ್ ತುರುಮರಿ, ಜಯೇಶ್ ಇರಕಲ, ಆನಂದ ರಾಜೊಳ್ಳಿ, ರವೀಂದ್ರ ಕಾಟಿಗರ, ವಿಜಯ್ ಮೇರವಾಡೆ, ಪ್ರಕಾಶ್ ಬಸವಾ, ಪ್ರವೀಣ ಹಣಗಿ, ಶಿವಾನಂದ ಹಳಿಜೋಳ, ವಜೀರ್, ರಶೀದ್, ರವಿ ಪಟ್ಟಣ ಮತ್ತು  ಹುಬ್ಬಳ್ಳಿಯ ಎಲ್ಲಾ ಛಾಯಾಗ್ರಹಕರು ಉಪಸ್ಥಿತರಿದ್ದರು