ಯೊಗೇಶಗೌಡ ಕೊಲೆ ಪ್ರಕರಣ ತನಿಖಾಧಿಕಾರಿಯಾಗಿದ್ದ ಚನ್ನಕೇಶವ ಟಿಂಗರಿಕರ್‌ಗೆ ಜಾಮೀನು

Share

ಧಾರವಾಡ: ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ, ಸಾಕ್ಷಿ ನಾಶಾ ಆರೋಪ ಹೊತ್ತಿದ್ದ ಇನ್ಸ್ ಪೆಕ್ಟರ್ ಚೆನ್ನಕೇಶವ ಟಿಂಗರಿಕರ್‌ಗೆ ಇಂದು ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಕಳೆದ ಹಲವು ದಿನಗಳಿಂದ ಸಿಬಿಐ ಬಂಧನ ಭೀತಿಯಲ್ಲಿದ್ದ ಚೆನ್ನಕೇಶವ ಟಿಂಗರಿಕರ್‌ ಅವರು ಕಳೆದ ನವೆಂಬರ್ 9ರಂದು ನಿರೀಕ್ಷಣಾ ಜಾಮೀನು ಕೋರಿ ಧಾರವಾಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಇಂದು ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ, ಧಾರವಾಡ ಹೈಕೋರ್ಟ್ ಈಗ ಇನ್ಸ್ ಪೆಕ್ಟರ್ ಚನ್ನಕೇಶವ ಟಿಂಗರಿಕರ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

2016ರಲ್ಲಿ ಯೋಗೇಶಗೌಡ ಕೊಲೆ ನಡೆದ ಸಂದರ್ಭದಲ್ಲಿ, ಇನ್ಸ್ ಪೆಕ್ಟರ್ ಚೆನ್ನಕೇಶವ ಟಿಂಗರಿಕರ್ ಅವರು ಧಾರವಾಡ ಉಪನಗರ ಠಾಣೆಯ ಅಧಿಕಾರಿ ‌ಆಗಿದ್ದರು. ಹಾಗಾಗಿ ಅಂದು ಯೊಗೇಶಗೌಡ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿ ಟಿಂಗರಿಕರ್ ಕರ್ತವ್ಯ ನಿರ್ವಹಿಸಿದರು. ಸದ್ಯ ಕೊಲೆ ಪ್ರಕರಣ ತನಿಖೆಯನ್ನು ಸಿಬಿಐ ಅಧಿಕಾರಿಗಳು ನಡೆಸುತ್ತಿದ್ದು, ಇಂದು ಪಿಎಸ್ಐ ಚನ್ನಕೇಶವ ಟಿಂಗರಿಕರ್‌ ಅವರು ಪ್ರಕರಣದ ಸಾಕ್ಷಿ ನಾಶಾ ಆರೋಪ ಹೊತ್ತಿದ್ದು, ಈಗ ನಿರೀಕ್ಷಣಾ ಜಾಮೀನು ಮೂಂಜುರಾದ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಚೆನ್ನಕೇಶವ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.