ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್‌ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Share

ಧಾರವಾಡ: ಉತ್ತರ ಕರ್ನಾಟಕ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರ ಮೇಲೆ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ ಸದಸ್ಯರು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಅರೋಪಿಸಿ ಧಾರವಾಡದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಹುಬ್ಬಳ್ಳಿ ಧಾರವಾಡ ಮಾಲೀಕರು ಮತ್ತು ಚಾಲಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಕರ್ನಾಟಕ ಟ್ಯಾಕ್ಸಿ ಡ್ರೈವರ್‌ಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ದೇಶದಲ್ಲಿ ಕೋರೊನಾ ಮಹಾಮಾರಿಯಿಂದ ಉತ್ತರ ಕರ್ನಾಟಕದ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಇದರ ಮಧ್ಯೆ ಈಗ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಧರ್ಮ ಕ್ಷೇತ್ರಗಳಿಗೆ ಬಾಡಿಗೆಗಳು ಬರುತ್ತಿವೆ. ಹಾಗೇ ಬಾಡಿಗೆಗೆ ಹೋದ ವಾಹನಗಳ ಚಾಲಕರ ಮತ್ತು ಮಾಲೀಕರ ಮೇಲೆ ಧರ್ಮಸ್ಥಳ, ಕುಂದಾಪುರ ಹಾಗೂ ಉಡುಪಿಯ ಟ್ಯಾಕ್ಸಿ ಚಾಲಕರು ಸುಖಾಸುಮ್ಮನೆ ದೌರ್ಜನ್ಯ ನಡೆಸಿ, ದೂರುಗಳನ್ನು ದಾಖಲು‌ ಮಾಡುತ್ತಿದ್ದಾರೆ.

ಸ್ಥಳಿಯ ಆರ್ ಟಿ ಓ ಅಧಿಕಾರಿಗಳಿಂದ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿದರು. ಕೂಡಲೇ ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಶನ್ ವಿರುದ್ಧ ಕ್ರಮ ಕೈಗೊಂಡು, ಆರ್ ಟಿ ಓ ಅಧಿಕಾರಿಗಳ ಮಾನಸಿಕ ಕಿರಿಕಿರಿ ನಿಲ್ಲಿಸಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.