ಪೇಡಾ ನಗರಿಗೂ ತಟ್ಟಿದ ‘ನಿವಾರ್’ ಚಂಡಮಾರುತ: ಮೋಡ ಕವಿದ ವಾತಾವರಣ

Share

ಧಾರವಾಡ: ಈಗಾಗಲೇ ತಮಿಳುನಾಡಿನಲ್ಲಿ ತನ್ನ ರುದ್ರ ನರ್ತನ ತೋರಿಸಿರುವ ನಿವಾರ್ ಜಂಡಮಾರುತದ ಎಫೆಕ್ಟ್ ಈಗ ರಾಜ್ಯ ಬೇರೆ ಬೇರೆ ಜಿಲ್ಲೆಗಳ ಮೇಲೆಯು ಬೀಳುತ್ತಿದ್ದು, ಪೇಡಾ ನಗರಿ ಧಾರವಾಡದಲ್ಲಿಯು ಕೂಡಾ ನಿವಾರ್ ಜಂಡುಮಾರುತದ ಎಫೆಕ್ಟ್ ಜೋರಾಗಿದೆ.

ಕಳೆದ ದಿನದಿಂದ ನಗರದಲ್ಲಿ ಮೂಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಇಂದು ಚಂಡಮಾರುತ್ತದ ಎಫೆಕ್ಟ್ ಬೆಳಿಗ್ಗೆಯಿಂದ ನಗರದಲ್ಲಿ ಹೆಚ್ಚಾಗಿ ಕಾಣುತ್ತಿದೆ. ನಗರದಲ್ಲಿ ಚುಮು ಚುಮು ಮಳೆ ಹನಿಗಳು ಬೀಳುತ್ತಿದ್ದು, ನಗರದ ಜನತೆ ಮನೆಯಿಂದ ಆಚ್ಚೆ ಬರಲು ಹಿಂದೆ ಮುಂದೆ ನೋಡುತ್ತಿದ್ದಾರೆ.

ನಗರದಲ್ಲಿ ಕೋಲ್ಡ್ ವಾತಾವರಣದಿಂದಾಗಿ ವಾಹನ ಸವಾರರು ಜಾಕೆಟ್‌ಗಳನ್ನು ಹಾಕಿಕೊಂಡೇ ತಮ್ಮ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದಾರೆ. ಅಲ್ಲದೆ ಮೋಡಕವಿದ ವಾತಾವರಣದಿಂದಾಗಿ ಎಲ್ಲಿ ಇವತ್ತು ನಗರದಲ್ಲಿ ಮಳೆಯಾಗುತ್ತೋ ಎಂಬ ಆತಂಕದಲ್ಲಿ ಜನರದ್ದಾಗಿದೆ. ಆದಾಗ್ಯೂ ಚುಮು ಚುಮು ಮಳೆ-ಚಳಿಯಲ್ಲೂ ಕೂಡಾ ಪೇಡಾನಗರಿಯ ಜನರು ಎಂದಿನಂತೆ ತಮ್ಮ ನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿದ್ದಾರೆ.