ಧಾರವಾಡ ಎಪಿಎಂಸಿ ಠಾಣೆಯ ಪಿಎಸ್ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಕೀಲರ ಆಕ್ರೋಶ

Share

ಧಾರವಾಡ: ಕಳೆದ ನವೆಂಬರ್ 25ರಂದು ನ್ಯಾಯವಾದಿಯ ಮೇಲೆ‌ ಧಾರವಾಡದ ನವನಗರ ಠಾಣೆಯ ಪಿಎಸ್ಐ ಹಲ್ಲೆ ಮಾಡಿರುವುದನ್ನು ಖಂಡಿಸಿ, ಧಾರವಾಡದಲ್ಲಿ‌ ಇಂದು ವಕೀಲರು ಬೀದಿಗೆ ಇಳಿದು ಪ್ರತಿಭಟನೆ‌ ನಡೆಸಿದರು.

ನಗರದ ಕೋರ್ಟ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ಮೆರವಣಿಗೆಯ ಮೂಲಕ ಆಗಮಿಸಿದ ಧಾರವಾಡ ಜಿಲ್ಲಾ ವಕೀಲರ‌ ಸಂಘದ ಸದಸ್ಯರು, ಪೊಲೀಸ್ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಇದೇ ವೇಳೆ‌ ಮನವಿ ಸ್ವೀಕರಿಸಲು ಧಾರವಾಡ ಜಿಲ್ಲಾಧಿಕಾರಿಗಳು ಬಾರದೆ ಇರುವುದಕ್ಕೂ ಆಕ್ರೋಶಗೊಂಡ ನ್ಯಾಯವಾದಿಗಳು ‌ಜಿಲ್ಲಾಧಿಕಾರಿಗಳ ವಿರುದ್ಧವು ಧಿಕ್ಕಾರ ಕೂಗಿದರು. ನವನಗರ ಠಾಣೆಯ ಇನ್ಸ್ಪೆಕ್ಟರ್ ವರು ಕಳೆದ ನವೆಂಬರ್ 25ರಂದು, ನ್ಯಾಯವಾದಿ ಶಂಕರ ಪಾಟೀಲ್‌ನನ್ನು ಸಾರ್ವಜನಿಕ ಸ್ಥಳದಲ್ಲಿ ಬೇಡಿ ಹಾಕಿ ಬಂಧಿಸಿ ಅವಮಾನ ಮಾಡಿದ್ದಾರೆ. ಸುಳು ಪ್ರಕರಣ ದಾಖಲಿಸಿ ಹಲ್ಲೆ ಮಾಡಿದ್ದಾರೆ ಎಂದು ನ್ಯಾಯವಾದಿಗಳು ಆರೋಪಿಸಿದರು.

ಕೂಡಲೇ ನವನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಬರುವ ಸೋಮವಾರದೂಳಗೆ ಪೊಲೀಸ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು ಇಲ್ಲಾವಾದಲ್ಲಿ‌‌, ಉಗ್ರವಾದ ಹೋರಾಟದ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.