ಕೊರೊನಾ ಮಹಾಮಾರಿ ಮಧ್ಯೆ ಧಾರವಾಡದಲ್ಲಿ ಚಿಕೂನ್ ಗುನ್ಯಾ

Share

ಧಾರವಾಡ, ಜೂನ್ 3: ಕೊರೊನಾ ಮಹಾಮಾರಿಯಿಂದ ಜನರು ತತ್ತರಿಸಿರುವಾಗಲೇ ಧಾರವಾಡದಲ್ಲೀಗ ಚಿಕೂನ್ ಗುನ್ಯಾದ ಆತಂಕ ಶುರುವಾಗಿದೆ.

ಜಿಲ್ಲೆಯ ಲಕಮಾಪೂರ ಗ್ರಾಮದ ವ್ಯಕ್ತಿಯೊಬ್ಬರಲ್ಲಿ ಚಿಕೂನ್ ಗುನ್ಯಾ ಕಾಣಿಸಿಕೊಂಡಿದೆ ಎನ್ನಲಾಗಿದೆ. ಈ‌ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಪಂಚಾಯ್ತಿಯಿಂದ ಫಾಗಿಂಗ್ ಕಾರ್ಯ ನಡೆಸಲಾಗ್ತಿದೆ.

ಕಳೆದ ಒಂದು ವಾರದ ಹಿಂದೆ ಗ್ರಾಮದ ವ್ಯಕ್ತಿ ಚಿಕೂನ್ ಗುನ್ಯಾದಿಂದ ಬಳಲಿದ ಹಿನ್ನೆಲೆ ಆರೋಗ್ಯ ಇಲಾಖೆ ತಕ್ಷಣ ಲಾರ್ವಾ ಸರ್ವೆ ಮಾಡಿಸಿತ್ತು. ನಿನ್ನೆಯಿಂದ ಗ್ರಾಮದಲ್ಲಿ ಫಾಗಿಂಗ್ ಕಾರ್ಯ ಆರಂಭವಾಗಿದೆ.