ಸಹೋದರರನ್ನು ಬಲಿ ಪಡೆದ ಹೆಮ್ಮಾರಿ ಕೊರೊನಾ

Share

ಧಾರವಾಡ, ಜೂನ್ 2 : ಕೊರೊನಾ ‌ವೈರಸ್​ಗೆ ತಾಲೂಕಿನ ಮುಗದ‌ ಗ್ರಾಮದ ಸಹೋದರರು ಬಲಿಯಾಗಿದ್ದಾರೆ. ಗ್ರಾಮದ ಸುಬ್ಬಪ್ಪ ಭೋವಿ ಹಾಗೂ ಭರಮಪ್ಪ ಭೋವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.

ಕಳೆದ ಕೆಲ ದಿನಗಳ‌ ಹಿಂದೆ ಸೋಂಕು ಕಾಣಿಸಿಕೊಂಡ ಪರಿಣಾಮ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಿರಿಯ ಜೀವಗಳನ್ನು ಕಳೆದುಕೊಂಡ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.