ರೈತರ ಬಗ್ಗೆ ಕೇಂದ್ರ ಸಚಿವ ವಿ.ಕೆ.ಸಿಂಗ್ ಹೇಳಿಕೆಗೆ ಆಮ್‌ ಆದ್ಮಿ ಪಕ್ಷ ಆಕ್ಷೇಪ

Share


ನವದೆಹಲಿ: ಕೇಂದ್ರ ವಿ.ಕೆ. ಸಿಂಗ್ ಹೇಳಿಕೆಗೆ ಆಮ್ ಅದ್ಮಿ ಪಕ್ಷ ಪ್ರತ್ಯುತ್ತರ ನೀಡಿದ್ದು, ಪ್ರತಿಭಟನಾಕಾರರು ರೈತರಂತೆ ಕಾಣಿಸಿಕೊಳ್ಳಲು ಅವರು ನೇಗಿಲು, ಎತ್ತಿನೊಂದಿಗೆ ಬರಬೇಕಾದ ಅಗತ್ಯವಿದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ರೈತ ವಿರೋಧಿ ಕಾಯ್ದೆಗಳ ವಿರುದ್ದ ಪ್ರತಿಭಟನೆ ನಡೆಸುತ್ತಿರುವವರಲ್ಲಿ ಅನೇಕರು ರೈತರಂತೆ ಕಾಣುತ್ತಿಲ್ಲ. ಕಾನೂನಿನ ವಿರೋಧಕ್ಕಿಂತಲೂ ಕಮಿಷನ್ ಪಡೆಯುವವರು ಇದರ ಹಿಂದಿದ್ದಾರೆ ಎಂದು ಕೇಂದ್ರ ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆಂದು ಎಎಸ್‌ಐ ವರದಿ ಮಾಡಿತ್ತು.

ಪ್ರತಿಭಟನೆಯಲ್ಲಿ ಕಾಣುತ್ತಿರುವ ಚಿತ್ರಗಳ ಪೈಕಿ ಅನೇಕರು ರೈತರಂತೆ ಕಾಣುತ್ತಿಲ್ಲ. ರೈತರ ಹಿತದೃಷ್ಟಿಯಿಂದ ಏನು ಮಾಡಲಾಗಿದೆ, ಇದು ಕೃಷಿ ಕಾನೂನಿನೊಂದಿಗೆ ಆಕ್ಷೇಪ ಹೊಂದಿರುವ ರೈತರಲ್ಲ. ಕಾನೂನಿನ ವಿರೋಧಕ್ಕಿಂತಲೂ ಕಮಿಷನ್ ಪಡೆಯುವವರು ಈ ಪ್ರತಿಭಟನೆಯ ಹಿಂದಿದ್ದಾರೆ ಎಂದು ಕೇಂದ್ರ ಸಚಿವ ವಿ.ಕೆ. ಸಿಂಗ್ ಹೇಳಿದ್ದಾರೆ.

ಐತಿಹಾಸಿಕ ಚಳುವಳಿ ಪ್ರಾರಂಭವಾದಂದಿನಿಂದಲೂ ಬಿಜೆಪಿ ನಾಯಕರು ಪ್ರತಿಭಟನೆಯನ್ನು ಖಾಲಿಸ್ತಾನ್ ಚಳುವಳಿ ಎಂದೂ, ಕಾಂಗ್ರೆಸ್ ಪ್ರೇರಿತ ಎಂದೂ ಟೀಕೆ ಮಾಡುತ್ತಲೆ ಇದ್ದು ಇದು ದೇಶದಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದೆ. ನಿನ್ನೆಯಷ್ಟೇ ಚಳುವಳಿ ನಿರತ ರೈತರೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿ, ಕಾನೂನಿನ ಬಗ್ಗೆ ಚರ್ಚೆ ನಡೆಸಲು ಸಮಿತಿಯೊಂದನ್ನು ರಚಿಸಿ ಎಂದು ನೀಡಿದ ಸಲಹೆಯನ್ನು ರೈತರು ತಿರಸ್ಕರಿಸಿದ್ದು, ಜಾರಿಗೆ ತಂದಿರುವ ಕಾನೂನನ್ನು ರದ್ದುಗೊಳಿಸಲೇ ಬೇಕು ಎಂದು ಪಟ್ಟುಹಿಡಿದಿದ್ದಾರೆ. ನಾಳೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.