ಭಾರತವನ್ನು ಕಾಪಾಡಲು ಲಾಕ್​ಡೌನ್ ಮಾಡಿ ; ಡಾ. ಆಂಥೊನಿ ಫೌಸಿ

Share

ವಾಷಿಂಗ್ಟನ್ ಡಿಸಿ: ಭಾರತದಲ್ಲಿ ಕೊವಿಡ್ ಸೋಂಕು ಹರಡುವುದನ್ನು ತಡೆಯಲು ತಕ್ಷಣವೇ ಇಡೀ ದೇಶದಲ್ಲಿ ಕೆಲ ವಾರಗಳ ಕಾಲ ಸಂಪೂರ್ಣ ಲಾಕ್​ಡೌನ್ ಘೋಷಿಸಬೇಕು ಎಂದು ಅಮೆರಿಕಾದ ಖ್ಯಾತ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೊನಿ ಫೌಸಿ ಅಭಿಪ್ರಾಯಪಟ್ಟಿದ್ದಾರೆ.

ಕೊವಿಡ್ ತಡೆಯಲು ಭಾರತದಲ್ಲಿ ಕೊವಿಡ್ ಲಸಿಕೆ, ಔಷಧ ಮತ್ತು ಪಿಪಿಇ ಕಿಟ್​ಗಳನ್ನು ಸಂಗ್ರಹಿಸುವುದು ಸಹ ಅತಿ ಪ್ರಮುಖ ಅಂಶವಾಗಿದೆ. ಕೊವಿಡ್ ಸುಳಿಯ ಅಪಾಯಕ್ಕೆ ಸಿಲುಕಿದವರನ್ನು ಅತ್ಯಂತ ಸಂಘಟನಾತ್ಮಕವಾಗಿ ರಕ್ಷಿಸುವ ಅಗತ್ಯವಿದೆ ಎಂದು ಡಾ. ಫೌಸಿ ತಿಳಿಸಿದ್ದಾರೆ.

ಭಾರತದ ಕೊವಿಡ್ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ಭಾರತಕ್ಕೆ ಎದುರಾಗಲಿರುವ ಮುಂದಿನ ಅಪಾಯದಿಂದ ಪಾರಾಗಲು ತಾತ್ಕಾಲಿಕ ಲಾಕ್​ಡೌನ್ ಘೋಷಿಸಬೇಕು. ವೈರಾಣುವಿನ ವಿರುದ್ಧದ ಹೋರಾಟದಲ್ಲಿ ಮುಂಚಿನಿಂದಲೂ  ವಿವರಿಸಿದಂತೆ ತ್ವರಿತ, ಮಧ್ಯಂತರ ಮತ್ತು ದೀರ್ಘಕಾಲಿಕ ಯೋಜನೆಗಳಿರುತ್ತವೆ. ಅಂತಹ ಯೋಜನೆಗಳನ್ನು ರೂಪಿಸಿಕೊಂಡರೆ ಮಾತ್ರ ವೈರಾಣುವಿನ ದಾಳಿಯಿಂದ ದೇಶವನ್ನು ಪಾರು ಮಾಡಬಹುದು ಎಂದರು.

ಸದ್ಯದ ಅತೀ ಪ್ರಮುಖ ವಿಷಯವೆಂದರೆ ತಕ್ಷಣವೇ ವೈದ್ಯಕೀಯ ಆಕ್ಸಿಜನ್​ನ ಪೂರೈಕೆ ಮಾಡುವುದು. ಔಷಧ, ಪಿಪಿಇ ಕಿಟ್ ಮತ್ತು ಲಸಿಕೆಯನ್ನು ಸಮರ್ಪಕವಾಗಿ ಪೂರೈಸುವುದು. ಇವುಗಳೆಲ್ಲವುಗಳ ಜತೆಗೆ ತಕ್ಷಣಕಜ್ಕೆ ಕೈಗೊಳ್ಳಬೇಕಾದ ಇನ್ನೊಂದು ನಿರ್ಧಾರವೆಂದೆರ ತಾತ್ಕಾಲಿಕವಾಗಿ ಲಾಕ್​ಡೌನ್ ಮಾಡುವುದು ಎಂದು ಅವರು ವಿವರಿಸಿದ್ದಾರೆ. ಚೀನಾದ ಉದಾಹರಣೆಯನ್ನು ಉಲ್ಲೇಖಿಸಿದ ಅವರು,  ಇಡೀ ಚೀನಾವನ್ನು ಲಾಕ್​ಡೌನ್  ಮೂಲಕ  ಬಹುದೊಡ್ಡ ಅಪಾಯದಿಂದ ಬಚಾವಾಯಿತು ಎಂದು ಅವರು ತಿಳಿಸಿದರು.

ದೀರ್ಘಕಾಲ ಕಾಲ ಲಾಕ್​ಡೌನ್ ಮಾಡುವ ಅಗತ್ಯವಿಲ್ಲ. ತಾತ್ಕಾಲಿಕವಾಗಿ ಒಂದು ತಿಂಗಳ ಮಟ್ಟಿಗಾದರೂ ಭಾರತವನ್ನು ಲಾಕ್​ಡೌನ್ ಮಾಡುವ ಮೂಲಕ ಕೊರೊನಾ ಹಾವಳಿಯನ್ನು ಕಡಿಮೆ ಮಾಡಬಹುದು. ಆದರೆ ವೈರಸ್​ನ ಚೈನ್​​ ಲಿಂಕ್​ಗಳನ್ನು ಮುರಿಯುವ ಮೂಲಕವೇ ಈ ಅಪಾಯದಿಂದ ಆಚೆ ಬರಬಹುದು ಎಂದು ಅವರು ಅಭಿಪ್ರಾಯಪಟ್ಟರು.