ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಅಧಿಕಾರಿಗಳಿಗೆ ಕರೆ ನೀಡಿದ ಜಿಲ್ಲಾಧಿಕಾರಿ

Share

ಗದಗ: ಜಿಲ್ಲೆಯ ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆಯಲ್ಲಿ ಸಾರ್ವಜನಿಕರಿಗೆ ಆದ್ಯತೆ ಮೇರೆಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಸೂಚಿಸಿದರು.

ಜಿಲ್ಲಾಡಳಿತ ಭವನದಲ್ಲಿ ಜರುಗಿದ ನಗರ ಸ್ಥಳೀಯ ಸಂಸ್ಥೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕರಿಗೆ ನೀಡಬಹುದಾದ ಮೂಲಭೂತ ಸೌಕರ್ಯಗಳಲ್ಲಿ ಮುಖ್ಯವಾದ ಕುಡಿಯುವ ನೀರು, ಬೀದಿ ದೀಪಗಳ ಹಾಗೂ ರಸ್ತೆಗಳ ದುರಸ್ತಿ ಕ್ರಮವಹಿಸಿ ಸೇವೆ ಒದಗಿಸಬೇಕು. ೨೪/೭ ನಿರಂತರ ನೀರು ಸರಬರಾಜು ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ತಿಳಿಸಿದರು.

ಮುಖ್ಯ ರಸ್ತೆಗಳಲ್ಲಿ ಶಾಶ್ವತ ಪರಿಹಾರವಾಗಿ ಪೈಪ್ ಲೈನ ಹಾಗೂ ಇತರೇ ಪರಿಕರಗಳ ಸ್ಥಳಾಂತರ ಕಾರ್ಯ ಕೈಗೊಂಡು ನಿರಂತರ ನೀರು ಸರಬರಾಜಿನಲ್ಲಿ ತೊಂದರೆ ಉದ್ಬವಿಸದಂತೆ ಕ್ರಮವಹಿಸಿ. ಸರ್ಕಲ್ ಗಳಲ್ಲಿ ಯೋಜನಾ ಬದ್ದವಾಗಿ ಶಾಶ್ವತ ಪರಿಹಾರ ನೀಡಿ ಸರ್ಕಲ್ ಗಳ ಸೌಂದರ್ಯ ಹಾಳಾಗದಂತೆ ಕ್ರಮವಹಿಸಲು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ನಿರ್ದೇಶಕ ರುದ್ರೇಶ ಎಸ್.ಎನ್, ಕಾರ್ಯಪಾಲಕ ಅಭಿಯಂತರ ಅನೀಲಕುಮಾರ ಮುದ್ದಾ ಸೇರಿದಂತೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಜರರಿದ್ದರು.