ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ: ಸಿಎಂಗೆ ಅಭಿನಂದನೆ

Share

ಗದಗ: ಜಿಲ್ಲೆಯ ಗಜೇಂದ್ರಘಡ ಪಟ್ಟಣದ ಮಾರುತೇಶ್ವರ ಜೀರ್ಣೋದ್ಧಾರ ಸಮಿತಿ ಹಾಗೂ ತಾಲೂಕು ಮರಾಠ ಸಮಾಜದ ಮುಖಂಡರು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಶಾಸಕ ಕಳಕಪ್ಪ ಬಂಡಿ ಅವರ ಮೂಲಕ ಅಭಿನಂದನಾ ಪತ್ರ ಸಲ್ಲಿಸಿದರು.

ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವುದರಿಂದ ಮರಾಠ ಸಮಾಜದಲ್ಲಿ ಹಿಂದುಳಿದವರಿಗೆ ಬಹಳ ಅನುಕೂಲವಾಗಲಿದೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಸಾಧಿಸಲು ಸಹಾಯವಾಗುತ್ತದೆ. ರಾಜ್ಯದ ಕನ್ನಡಿಗರ ಬಹುದಿನದ ಬೇಡಿಕೆಗೆ ರಾಜ್ಯ ಬಿಜೆಪಿ ಸರ್ಕಾರ ಸ್ಪಂದಿಸುವ ಮೂಲಕ ಮರಾಠ ಸಮಾಜ ಅಭಿವೃದ್ಧಿಗೆ ಮುಂದಾಗಿರುವುದು ಹರ್ಷ ತಂದಿದೆ ಎಂದು ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ಮರಾಠ ಸಮಾಜದ ಅಧ್ಯಕ್ಷ ವೇಣಪ್ಪ ಇಂಗಳೆ, ಯಮನಪ್ಪ ತಿರುಕೋಜಿ, ಜಗದೀಶ್ ಕಲ್ಗುಡಿ, ರಾಮಣ್ಣ ಮಾಲಗಿತ್ತಿ, ಬಾಳು ಪವಾರ್, ಕಳಕಪ್ಪ ಕಸಾಯಿ, ಕೃಷ್ಣ ಸೂರ್ಯವಂಶಿ, ಶಿವಾಜಿ ಹಾಳಕೇರಿ, ಲಕ್ಷ್ಮಣ ರಾಮಜಿ, ಮುದ್ದಪ್ಪ ಗಡ್ಡದ್, ಮುದ್ದಪ್ಪ ಕಲ್ಗುಡಿ, ಕಳಕಪ್ಪ ಇದ್ದರು.