ಜಿಲ್ಲೆಯಲ್ಲಿ ಸಕಾಲ ಸಪ್ತಾಹ ಆಚರಣೆಗೆ ನೋಡಲ್ ಅಧಿಕಾರಿಗಳ ತಂಡದ ಭೇಟಿ

Share

ಗದಗ: ಜಿಲ್ಲೆಯಲ್ಲಿ ಸಕಾಲ ಸಪ್ತಾಹವನ್ನು ನವೆಂಬರ್ 30ರಿಂದ ಡಿಸೆಂಬರ್ 5 ರವರೆಗೆ ಯಶಸ್ವಿಯಾಗಿ ಆಚರಿಸಲಾಗುತ್ತಿದ್ದು ಗದಗ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ್ ಎಸ್.ಎನ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ವಿನೋದಕುಮಾರ್ ಹೆಗ್ಗಳಕಿ ಇವರನ್ನು ನೋಡಲ್ ಅಧಿಕಾರಿಗಳೆಂದು ನೇಮಕ ಮಾಡಲಾಗಿದೆ.

ಸದರಿ ನೋಡಲ್ ಅಧಿಕಾರಿಗಳ ನೇತೃತ್ವದ ತಂಡವು ಭೇಟಿ ನೀಡುವ ಸಮಯ ಹಾಗೂ ದಿನಾಂಕ ಕೆಳಕಂಡಂತಿವೆ.

ಗದಗ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಅವರ ನೇತೃತ್ವದ ತಂಡವು ಡಿಸೆಂಬರ್ 1ರಂದು ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಹಶೀಲ್ದಾರ ಕಚೇರಿ, ಡಿಸೆಂಬರ್ 2ರಂದು ಗಜೇಂದ್ರಗಡ ತಹಶೀಲ್ದಾರ ಕಚೇರಿ ಮತ್ತು ನರೇಗಲ್ ನಾಡಕಚೇರಿ, ಡಿಸೆಂಬರ್ 3ರಂದು ರೋಣ ತಹಶೀಲ್ದಾರ ಕಚೇರಿ ಮತ್ತು ಹೊಳೆ ಆಲೂರ ನಾಡಕಚೇರಿ, ಡಿಸೆಂಬರ್ 4ರಂದು ನರಗುಂದ ತಹಶೀಲ್ದಾರ ಕಚೇರಿ ಮತ್ತು ಕೊಣ್ಣೂರ ನಾಡಕಚೇರಿ, ಡಿಸೆಂಬರ್ 5ರಂದು ಗದಗ ತಹಶೀಲ್ದಾರ ಕಚೇರಿ ಮತ್ತು ನಾಡ ಕಚೇರಿಗೆ ಭೇಟಿ ನೀಡಲಿದೆ.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ್ ಎಸ್. ಎನ್ ಅವರ ನೇತೃತ್ವದ ತಂಡವು ಡಿಸೆಂಬರ್ 1 ರಂದು ಲಕ್ಷ್ಮೇಶ್ವರ ಪುರಸಭೆ ಮತ್ತು ಶಿರಹಟ್ಟಿ, ಪಟ್ಟಣ ಪಂಚಾಯತ್, ಡಿಸೆಂಬರ್ 2ರಂದು ರೋಣ ಪುರಸಭೆ, ಡಿಸೆಂಬರ್ 3ರಂದು ನರಗುಂದ ಪುರಸಭೆ, ಡಿಸೆಂಬರ್ 4ರಂದು ಮುಂಡರಗಿ ಪುರಸಭೆ, ಡಿಸೆಂಬರ್ 5ರಂದು ಗದಗ ಬೆಟಗೇರಿ ನಗರಸಭೆ ಮತ್ತು ಮುಳಗುಂದ ಪಟ್ಟಣ ಪಂಚಾಯತ್‍ಗೆ ಭೇಟಿ ನೀಡಲಿದೆ.