ಕ್ಷಿಪ್ರ ಕಾರ್ಯಾಚರಣೆ: ಬಾಲ್ಯವಿವಾಹದಿಂದ ಆರು ಮಕ್ಕಳ ರಕ್ಷಣೆ

Share

ಗದಗ: ಜಿಲ್ಲೆಯ ರೋಣ ತಾಲ್ಲೂಕಿನ ಶಾಂತಗೇರಿ (೦೧), ಕೊತಬಾಳ (೦೨), ಯಾಸ ಹಡಗಲಿ (೦೧), ಮುಂಡರಗಿ ತಾಲ್ಲೂಕಿನ ಪೇಠಲೂರು ಗ್ರಾಮದ (೦೧) ಹಾಗೂ ಗದಗ ತಾಲ್ಲೂಕಿನ ಹಾತಲಗೇರಿ (೦೧) ಗ್ರಾಮಗಳ ಒಟ್ಟು ೦೬ (೧೨ ರಿಂದ ೧೭ ವರ್ಷದೊಳಗಿನ) ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಬಾಲ್ಯವಿವಾಹದಿಂದ ರಕ್ಷಿಸಲಾಗಿದೆ.

ಉಸ್ಮಾನ್ ಎ. ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಇವರ ಮಾರ್ಗದರ್ಶನದಲ್ಲಿ ಬಸಮ್ಮ ಹೂಲಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ರೋಣ, ಶ್ರೀಮತಿ ಹುಲಿಗೆಮ್ಮ ಜೋಗೆರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಗದಗ ಮತ್ತು ಮುಂಡರಗಿ ಸಿಬ್ಬಂದಿ ರಾಘವೇಂದ್ರ ಕೌಜಗೇರಿ, ಕೆ.ಜಿ ಅಂಬಿಗೇರ, ಸುವರ್ಣಾ ಹಾನಾಪುರ, ವಾಹನ ಚಾಲಕರು ಫಾರೂಖ ದಳವಾಯಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಬೈಲಪ್ಪ ಗೌಡ ಮಲ್ಲನಗೌಡರ, ಪ್ರವೀಣಕುಮಾರ ಬೆಟಗೇರಿ, ಸವಿತಾ ಹರ್ತಿ, ಲಲಿತಾ ಕುಂಬಾರ, ವಾಹನ ಚಾಲಕ ಅಶೋಕ ಸುಣಗಾರ, ಪೊಲೀಸ್ ಇಲಾಖೆ ಸಿಬ್ಬಂದಿ ಬಸವರೆಡ್ಡಿ ರಿತ್ತಿ, ಗದಗ ಎಮ್.ಪಿ.ಪಾಟೀಲ, ರೋಣ, ಅಚಲೇಶ ಹೊನ್ನಿನಾಯ್ಕರ, ಮುಂಡರಗಿ ಇವರು ಕ್ಷಿಪ್ರ ಕಾರ್ಯಾಚರಣೆ ಮಾಡಿ ಜಿಲ್ಲೆಯ ೦೬ ಅಪ್ರಾಪ್ತ ಮಕ್ಕಳನ್ನು ಬಾಲ್ಯವಿವಾಹದಿಂದ ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಂಜುನಾಥ ಬಮ್ಮನಕಟ್ಟಿ ಇವರ ಎದುರಿಗೆ ಹಾಜರುಪಡಿಸಿ, ಮುಂದಿನ ವಿಚಾರಣೆ ಬಾಕಿ ಇರಿಸಿ, ತಾತ್ಕಾಲಿಕ ಅಭಿರಕ್ಷಣೆಗಾಗಿ ಬಾಲಕಿಯರ ಸರಕಾರಿ ಬಾಲಮಂದಿರದಲ್ಲಿ ಪುನರ್ವಸತಿಗೊಳಿಸಲಾಗಿದೆ. ಎಂದು ಅವಿನಾಶಲಿಂಗ ಗೋಟಖಿಂಡಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಗದಗ ಇವರು ತಿಳಿಸಿರುತ್ತಾರೆ.