ಕೋವಿಡ್ ನಿಯಂತ್ರಣ, ಜಿಲ್ಲೆಯ ಫಾರ್ಮಸಿ ಅಧಿಕಾರಿಗಳ ಶ್ರಮ ಅಪಾರ: ಡಾ. ಸತೀಶ ಬಸರಿಗಿಡದ

Share

ಗದಗ: ನಮ್ಮೆಲ್ಲರ ನಿದ್ದೆಗೆಡಿಸಿದ ಮಾಹಾಮಾರಿ ಕೋವಿಡ್-೧೯ ನಿಯಂತ್ರಿಸುವಲ್ಲಿ ಫಾರ್ಮಸಿ ಅಧಿಕಾರಿಗಳ ಪಾತ್ರ ಹಾಗೂ ಈ ಸಂಧರ್ಭದಲ್ಲಿ ಕೋವಿಡ್-೧೯ ನಿಯಂತ್ರಣಕ್ಕೆ ಸಂಬಧಿಸಿದ ಎಲ್ಲಾ ಔಷಧ ಹಾಗೂ ಇತರೆ ವಸ್ತುಗಳನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಜಿಲ್ಲೆಯ ಎಲ್ಲಾ ಫಾರ್ಮಸಿ ಅಧಿಕಾರಿಗಳು ತುಂಬ ಶ್ರಮಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ ಬಸರಿಗಿಡದ ಹೇಳಿದರು.

ಗದಗ ನಗರದ ಬಾಲಾಜಿ ಕನ್ವೇಶನ್ ಹಾಲ್‌ನಲ್ಲಿ
ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ, ಬೆಂಗಳೂರು ಜಿಲ್ಲಾ ಶಾಖೆ ಗದಗ, ೫೯ನೇಯ ರಾಷ್ಟೀಯ ಫಾರ್ಮಸಿ ಸಪ್ತಾಹ ಅಂಗವಾಗಿ ಹಮ್ಮಿಕೊಂಡ ರಕ್ತದಾನ ಶಿಬಿರ ಹಾಗೂ ವೈಜ್ಞಾನಿಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಕಾರ್ಯದಕ್ಷತೆಯನ್ನು ಪ್ರಶಂಸಿಸುತ್ತ ಫಾರ್ಮಸಿ ವಿಭಾಗಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ತೊಂದರೆಗಳಿದ್ದರೆ ನಿವಾರಿಸುವುದಾಗಿ ಹೇಳಿದರು