ಕನ್ನಡ ನಾಡು ನುಡಿ ಸೇವೆಯಲ್ಲಿ ಕಸಾಪ ಮುಂಚೂಣಿ: ಐ ಎ ರೇವಡಿ ಅಭಿಮತ

Share

ಗದಗ: ಕೆಂಪು ಬಣ್ಣ ಅಭಿವೃದ್ಧಿಯ ಸಂಕೇತ, ಅರಿಸಿಣ ಬಣ್ಣ ಆರೋಗ್ಯಕರ ಸಮಾಜದ ಸಂಕೇತವಾಗಿದ್ದು ಎಲ್ಲರೂ ಅಭಿಮಾನಪಡುವ ಸಂಗತಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರೋಣ- ಗಜೇಂದ್ರಗಡ ತಾಲೂಕಿನ ಅಧ್ಯಕ್ಷ ಐ.ಎ.ರೇವಡಿ ಅಭಿಪ್ರಾಯ ಪಟ್ಟರು.

ಅವರು ಗದಗ ಜಿಲ್ಲೆಯ ಗಜೇಂದ್ರಗಡದ ಮಸ್ಕಿಯವರ ಓಣಿಯಲ್ಲಿರುವ ಕೊಟ್ರೇಶ ಚಿಲಕಾರವರ ಮನೆಯ ಆವರಣದಲ್ಲಿ ಜರುಗಿದ ಕಸಾಪ ೨೦೨ನೇ ವಾರದ ಸಾಹಿತ್ಯ ಚಿಂತನಾ ಗೋಷ್ಠಿ, ಹಾಗೂ ಕನ್ನಡ ಧ್ವಜ ಸ್ಥಂಬದ ಉದ್ಘಾಟನೆ, ಕನ್ನಡ ರಂಗೋಲಿ ಬಿಡಿಸುವ ಮತ್ತು ಅಮರ ಜ್ಯೋತಿಗಳು ಎನ್ನುವ ಸಾಮಾಜಿಕ ನಾಟಕ ಕೃತಿ ಲೋಕಾಪ೯ಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಧ್ವಜದ ಬಗ್ಗೆ ಉಪನ್ಯಾಸ ನೀಡಿದ ಶಿಲ್ಪಾ ಅಗ್ನೂರ, ಧ್ವಜವನ್ನು ನವೆಂಬರ್ ಒಂದರಂದು, ಕರ್ನಾಟಕ ರಾಜೋತ್ಸವದ ಸಂದರ್ಭದಲ್ಲಿ ಸಾರ್ವಜನಿಕ ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಬಾವುಟವನ್ನು ಹಾರಿಸಿ, ಕರ್ನಾಟಕದ ನಾಡಗೀತೆಯನ್ನು ಹಾಡುವ ಮೂಲಕ
ನಾಡು ನುಡಿ ಸೇವೆಗೆ ಕೊಡುಗೆ ನೀಡಿದವರನ್ನು ಸ್ಮರಣೆ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಕಲ್ಮೇಶ ಬಡಿಗೇರ ರಚಿಸಿದ ಅಮರ ಜ್ಯೋತಿಗಳು ಸಾಮಾಜಿಕ ನಾಟಕ ಲೋಕಾರ್ಪಣೆ ಮಾಡಲಾಯಿತು. ವೀರಣ್ಣ ಪಟ್ಟಣಶೆಟ್ಟಿ, ಲೀಲಾವತಿ ವನ್ನಾಲ, ದ್ರಾಕ್ಷಾಯಿಣಿ ಚೋಳಿನ, ಶಿಲ್ಪಾ ಅಗ್ನೂರ, ಹನುಮಂತ ಚುಂಚಾ, ಕೊಟ್ರೇಶ್ ಚಿಲಕಾ, ಕೆ.ಜಿ.ಸಂಗಟಿ, ಹೆಚ್. ಆರ್. ಭಜಂತ್ರಿ, ಎನ್. ಎಸ್. ಸವಣೂರ, ಶರಣಪ್ಪ ಬೇವಿನಕಟ್ಟಿ, ಎಂ.ಎಸ್. ಮಕಾನದಾರ, ಶಂಕರ್ ಕಲ್ಲಿಗನೂರ, ಅರವಿಂದ ಶ್ಯಾಸಲ್, ಸುಭಾಸ ನರಾಲ, ವಿಠ್ಠಲ ಗಾಯಕವಾಡ. ನಾಸೀರಅಲಿ ಸುರಪುರ. ಸುರೇಶ ಗಾಯಕವಾಡ. ಅಶೋಕ ವನ್ನಾಲ, ಮಲ್ಲೇಶ ಸಿಂದಗಿ, ಹೇಮಾ ಚಿಲಕಾ, ಗುಲಾಮನಬಿ ಹುನಗುಂದ, ಮೀನಾಕ್ಷಿ ಚುಂಚಾ ಮುಂತಾದವರು ಹಾಜರಿದ್ದರು.