ಶಮಿ ಹ್ಯಾಟ್ರಿಕ್ ಮ್ಯಾಜಿಕ್: ಭಾರತಕ್ಕೆ ಅಫ್ಘಾನ್ ವಿರುದ್ಧ ರೋಚಕ ಗೆಲುವು

Share

ಸೌತಾಂಪ್ಟನ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಶನಿವಾರ ಅಫಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಹ್ಯಾಟ್ರಿಕ್ ಮ್ಯಾಜಿಕ್ ನೆರವಿನಿಂದ ಟೀಮ್ ಇಂಡಿಯಾ 11 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಲೋ ಸ್ಕೋರಿಂಗ್ ಪಂದ್ಯದಲ್ಲಿ ಸೋಲಿನ ಅಪಾಯದಿಂದ ಪಾರಾಗಿದೆ.

ಇದರೊಂದಿಗೆ ಆಡಿರುವ ಐದನೇ ಪಂದ್ಯದಲ್ಲಿ ನಾಲ್ಕನೇ ಗೆಲುವು ಹಾಗೂ ಡ್ರಾ ಫಲಿತಾಂಶ ದಾಖಲಿಸಿರುವ ಟೀಮ್ ಇಂಡಿಯಾ ಒಟ್ಟು ಒಂಬತ್ತು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ನೆಗೆದಿದೆ.
ಅತ್ತ ಸತತ ಆರನೇ ಸೋಲಿಗೆ ಗುರಿಯಾಗಿರುವ ಅಫಘಾನಿಸ್ತಾನ ಅಧಿಕೃತವಾಗಿ ಟೂರ್ನಿಯಿಂದಲೇ ನಿರ್ಗಮಿಸಿದೆ. ಆದರೂ ಭಾರತಕ್ಕೆ ದಿಟ್ಟ ಹೋರಾಟ ನೀಡುವ ಮೂಲಕ ಕ್ರಿಕೆಟ್ ಪ್ರೇಮಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ.