ವಿಶ್ವಕಪ್ ಪಂದ್ಯಾವಳಿ: ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ದಾಖಲೆ ಬರೆದ ಬುಮ್ರಾ

Share

ಇಂಗ್ಲೆಂಡ್: ಭಾರತದ ಬಲಗೈ ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾ ಲಂಕಾ ವಿರುದ್ಧದ ಪಂದ್ಯದಲ್ಲಿ 1 ವಿಕೆಟ್ ಪಡೆಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವೇಗವಾಗಿ 100 ವಿಕೆಟ್ ಪಡೆದ 2 ನೇ ಭಾರತೀಯ ಎಂಬ ಖ್ಯಾತಿಗೆ ಭಾಜನರಾದರು.
ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಶನಿವಾರದಂದು ಶ್ರೀಲಂಕಾ ವಿರುದ್ಧ ಸಾಗುತ್ತಿರುವ ಪಂದ್ಯದಲ್ಲಿ ಬುಮ್ರಾ ಸ್ಮರಣೀಯ ಸಾಧನೆ ಮಾಡಿದರು. ಲಂಕಾ ನಾಯಕ ದಿಮುತ್ ಕರುಣಾರತ್ನೆ ಬುಮ್ರಾ ಪಾಲಿಗೆ 100ನೇ ಬಲಿಯಾದರು.


ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ಪ್ರಕಾರದ ಕ್ರಿಕೆಟ್‌ನಲ್ಲಿ ಬುಮ್ರಾ ಭಾರತದ ಅವಿಭಾಜ್ಯ ಅಂಗವಾಗಿದ್ದಾರೆ. ಅಲ್ಲದೆ ತಮ್ಮದೇ ಆದ ವಿಶಿಷ್ಟ ಬೌಲಿಂಗ್ ಶೈಲಿಯ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಮೊಹಮ್ಮದ್ ಶಮಿ ಬಳಿಕ ಅತಿ ವೇಗದಲ್ಲಿ 100 ವಿಕೆಟ್ ಕಬಳಿಸಿದ ಎರಡನೇ ಭಾರತೀಯ ವೇಗಿ ಎಂಬ ಹಿರಿಮೆಗೆ ಪಾತ್ರರಾದ ಬುಮ್ರಾ ಜಾವಗಲ್ ಶ್ರೀನಾಥ್, ಇರ್ಫಾನ್ ಪಠಣ ದಾಖಲೆಯನ್ನು ಮುರಿದರು.


ಏಕದಿನ ಕ್ರಿಕೆಟ್ ನಲ್ಲಿ ವೇಗವಾಗಿ 100 ವಿಕೆಟ್ ಪಡೆದ ಸಾಧನೆ ಬಾಲರ್
ಮೊಹಮ್ಮದ್ ಶಮಿ – 56 ಪಂದ್ಯದಲ್ಲಿ 100 ವಿಕೆಟ್
ಜಸ್ ಪ್ರೀತ್ ಬುಮ್ರಾ – 57 ಪಂದ್ಯದಲ್ಲಿ 100 ವಿಕೆಟ್
ಇರ್ಫಾನ್ ಪಠಾಣ್ – 59 ಪಂದ್ಯದಲ್ಲಿ 100 ವಿಕೆಟ್
ಜಹೀರ್ ಖಾನ್ – 65 ಪಂದ್ಯದಲ್ಲಿ 100 ವಿಕೆಟ್
ಅಜಿತ್ ಅಗರ್ಕರ್ – 67 ಪಂದ್ಯದಲ್ಲಿ 100 ವಿಕೆಟ್
ಜಾವಗಲ್ ಶ್ರೀನಾಥ್ – 68 ಪಂದ್ಯದಲ್ಲಿ 100 ವಿಕೆಟ್