ಇಂಡೋ-ಪಾಕ್ ಕ್ರಿಕೆಟ್ ಕದನ: ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Share

ಮ್ಯಾಂಚೆಸ್ಟರ್: ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಕ್ರಿಕೆಟ್ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 89 ರನ್ ಗಳ ಅಂತರದ ಭರ್ಜರಿ ಗೆಲವು ಸಾಧಿಸಿದೆ.
ಪಾಕಿಸ್ತಾನ 35 ಓವರ್ ನಲ್ಲಿ ಬ್ಯಾಟಿಂಗ್ ಮಾಡುವಾಗ ಮಳೆ ಅಡ್ದಿ ಪಡಿಸಿದ ಕಾರಣ 40 ಓವರ್ ಗಳಿಗೆ ಪಂದ್ಯವನ್ನು ಸೀಮಿತಗೊಳಿಸಲಾಯಿತು. ಅಂತಿಮವಾಗಿ ಡಿಆರ್ ಎಸ್ (ಡಕ್ವರ್ತ) ನಿಯಮದ ಅನ್ವಯ ಭಾರತ ತಂಡ 89 ರನ್ ಗಳ ಅಂತರದಲ್ಲಿ ಜಯಗಳಿಸಿತು. ಭಾರತ ಸತತ 7 ನೇ ಬಾರಿ ಪಾಕ್ ತಂಡವನ್ನು ವಿಶ್ವಕಪ್ ನಲ್ಲಿ ಸೋಲಿಸುವ ಮೂಲಕ ಅಂಕ ಪಟ್ಟಿಯಲ್ಲಿ 3 ಸ್ಥಾನಕ್ಕೆ ಏರಿತು. ಭಾರತ ತಂಡ 50 ಓವರ್ ಗೆ 5 ವಿಕೆಟ್ ನಷ್ಟಕ್ಕೆ 336 ಗಳಿಸಿದರೆ, ಪಾಕ್ 40 ಓವರ್ ಗೆ 6 ವಿಕೆಟ್ ಕಳೆದುಕೊಂಡು 212 ರನ್ ಗಳಿಸಲಷ್ಟೆ ಶಕ್ತವಾಯಿತು.