ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ: ಹಾವೇರಿ ಜಿಲ್ಲೆಗೆ 14ನೇ ಸ್ಥಾನ

Share

ಹಾವೇರಿ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆಗೆ ಈ ಬಾರಿ 14 ನೇ ಸ್ಥಾನ ಲಭಿಸಿದ್ದು, ಶೇ 68.01 ರಷ್ಟು ಫಲಿತಾಂಶ ಬಂದಿದೆ. ಹಿಂದಿನ ವರ್ಷ ಜಿಲ್ಲೆಗೆ 16ನೇ ಸ್ಥಾನ ಸಿಕ್ಕಿದ್ದು, ಈ ಬಾರಿ ಎರಡು ಸ್ಥಾನ ಮೇಲೇರಿದೆ.

ಈ ಬಾರಿ 12,179 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 8,283 ವಿದ್ಯಾರ್ಥಿಗಳು ಉರ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ 57.7, ವಾಣಿಜ್ಯ ವಿಭಾಗದಲ್ಲಿ ಶೇ 77.34 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ 76 ಫಲಿತಾಂಶ ಸಿಕ್ಕಿದೆ‌.

ನಗರ ಪ್ರದೇಶದ ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಶೇ 67.04 ಫಲಿತಾಂಶ ಪಡೆದರೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೇ 69.66 ಫಲಿತಾಂಶ ಪಡೆಯುವ ಮೂಲಕ ಮೇಲುಗೈ ಸಾಧಿಸಿದ್ದಾರೆ.