ದ್ವಿತೀಯ ಪಿಯುಸಿ ಫಲಿತಾಂಶ: ಅಗಸ್ಥ್ಯ ವಿಜ್ಞಾನ ಪಪೂ ಕಾಲೇಜಿಗೆ ಶೇ.86.76 ಫಲಿತಾಂಶ

Share

ಹಾವೇರಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.86.76 ರಷ್ಟು ಫಲಿತಾಂಶ ಪಡೆಯುವ ಮೂಲಕ ನಗರದ ಪ್ರತಿಷ್ಠಿತಿ ಅಗಸ್ಥ್ಯ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

ಒಟ್ಟು 68 ವಿದ್ಯಾರ್ಥಿಗಳಲ್ಲಿ, ಉನ್ನತ ಶ್ರೇಣಿಯಲ್ಲಿ 08, ಪ್ರಥಮ ಶ್ರೇಣಿಯಲ್ಲಿ 36, ದ್ವಿತೀಯ ಶ್ರೇಣಿಯಲ್ಲಿ 13, ತೃತೀಯ ಶೇಣಿಯಲ್ಲಿ 02 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳಾದ ಹರ್ಷಿತಾ ಪಿ. ಚೌಕಿಮಠ (ಶೇ.93.83) (ಪಿಸಿಎಂಬಿ 94.4) ಪ್ರಥಮ, ಸತೀಶ ವಾದೋನಿ (ಶೇ.92.33) (ಪಿಸಿಎಂಬಿ 95.75) ದ್ವಿತೀಯ, ಬಿಂದು ಹಾವೇರಿ (ಶೇ.91) (ಪಿಸಿಎಂಬಿ 92.25) ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ಶೇ.100ಕ್ಕೆ 100 ಅಂಕ ಪಡೆದಿದ್ದಾರೆ. ಈ ಸಾಧನೆ ತೋರಿದ ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಚಾರ್ಯರು, ಆಡಳಿತ ಮಂಡಳಿ ಹಾಗೂ ಕಾಲೇಜಿನ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.