ಹಾವೇರಿ: ಮತ್ತೆ 12 ಮಂದಿಗೆ ಕೋವಿಡ್ ಸೋಂಕು ದೃಢ

ಸಾಂದರ್ಭಿಕ ಚಿತ್ರ

Share

ಹಾವೇರಿ: ಕೆನರಾ ಬ್ಯಾಂಕ್ ಉದ್ಯೋಗಿ ಸೇರಿದಂತೆ ಜಿಲ್ಲೆಯಲ್ಲಿ ಗುರುವಾರ 12 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. 33 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 334 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 244 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಏಳು ಮಂದಿ ಮೃತಪಟ್ಟಿದ್ದಾರೆ. 83 ಪ್ರಕರಣಗಳು ಸಕ್ರಿಯವಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಗುರುವಾರ ಹಾವೇರಿಯಲ್ಲಿ 11 ಹಾಗೂ ರಾಣೇಬೆನ್ನೂರಿನ ಓರ್ವ ವ್ಯಕ್ತಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸೋಂಕಿತರನ್ನು ನಿಗಧಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹಾವೇರಿ ವಿದ್ಯಾನಗರದ ನಿವಾಸಿ ಕೆನರಾ ಬ್ಯಾಂಕಿನ ಸೂಪರ್‌ ವೈಸರ್ 33 ವರ್ಷದ ಪುರುಷ (Hvr-318), ಶಿವಬಸವನಗರ ಕಂಟೈನ್ ಮೆಂಟ್ ಜೋನ್‍ನ ಪಿ-25371 ಸೋಂಕಿತನ ಸಂಪರ್ಕಿತ 31 ವರ್ಷದ ಮಹಿಳೆ (Hvr-319), ಮೆಹಬೂಬ ನಗರದ 38 ವರ್ಷದ ಪುರುಷ(Hvr-320), 22 ವರ್ಷದ ಮಹಿಳೆ (Hvr-321), 26 ವರ್ಷದ ಮಹಿಳೆ (Hvr-322), ಶಿವಾಜಿನಗರ ಮೊದಲ ಕ್ರಾಸ್‍ನ ಪಿ-28497ರ ಸೋಂಕಿತರ ಸಂಪರ್ಕಿತರಾದ 6 ವರ್ಷದ ಗಂಡು ಮಗು(Hvr-323), 32 ವರ್ಷದ ಮಹಿಳೆ (Hvr-324), 35 ವರ್ಷದ ಮಹಿಳೆ(Hvr-325), 65 ವರ್ಷದ ಮಹಿಳೆ (Hvr-326), ಎಂಟು ವರ್ಷದ ಬಾಲಕ(Hvr-327), ನಾಲ್ಕು ವರ್ಷದ ಬಾಲಕ (Hvr-328) ಹಾಗೂ ರಾಣೇಬೆನ್ನೂರಿನ ಮಾರುತಿ ನಗರದ ಐ.ಎಲ್.ಐ ಲಕ್ಷಣ ಹೊಂದಿದ 26 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.