ಹಾವೇರಿ: 160 ಮಂದಿಗೆ ಕೋವಿಡ್ ದೃಢ

Share

ಹಾವೇರಿ: ಆರೋಗ್ಯ ಇಲಾಖೆಯ ಕ್ವಾಲಿಟಿ ಮ್ಯಾನೇಜರ್, ಕಂದಾಯ ಇಲಾಖೆಯ ಎ.ಎಸ್.ಓ., ಕೆ.ಇ.ಬಿ.,ಪುರಸಭೆ, ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಉದ್ಯೋಗಿಗಳು ಒಳಗೊಂಡಂತೆ ಜಿಲ್ಲೆಯಲ್ಲಿ ಶುಕ್ರವಾರ 160 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, 37 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 4952 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಶುಕ್ರವಾರದ ವರೆಗೆ 3299 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ 119 ಜನರು ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಒಟ್ಟು 1534 ಸಕ್ರಿಯ ಪ್ರಕರಣಗಳಿವೆ.

ತಾಲ್ಲೂಕುವಾರು ವಿವರ: ಶಿಗ್ಗಾಂವ-32, ಬ್ಯಾಡಗಿ ಹಾಗೂ ರಾಣೇಬೆನಬ್ನೂರು ತಲಾ 30, ಹಾವೇರಿ-25, ಹಿರೇಕೆರೂರು-19, ಹಾನಗಲ್ ಹಾಗೂ ಸವಣೂರ ತಲಾ 10 ಹಾಗೂ ಇತರೆ ನಾಲ್ಕು ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಗುಣಮುಖರಾಗಿ ಸವಣೂರು-21, ಬ್ಯಾಡಗಿ-14 ರಾಣೇಬೆನ್ನೂರ ತಾಲೂಕಿನ ಇಬ್ಬರು ಬಿಡುಗಡೆ ಹೊಂದಿದ್ದಾರೆ.