ಹಾವೇರಿ: 156 ಮಂದಿಗೆ ಕೋವಿಡ್ ದೃಢ, ಮೂವರ ಸಾವು

Share

ಹಾವೇರಿ: ಜಿಲ್ಲೆಯಲ್ಲಿ ಬುಧವಾರ ಐವರು ಕರ್ತವ್ಯ ನಿರತ ಕೊರೊನಾ ವಾರಿಯರ್ಸ್‌ ಸೇರಿದಂತೆ 156 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 69 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಇಂದು ಸವಣೂರು ತಾಲ್ಲೂಕಿನಲ್ಲಿ 03, ಶಿಗ್ಗಾವಿ 14, ಬ್ಯಾಡಗಿ 23, ಹಾನಗಲ್ 09, ಹಾವೇರಿ 55, ಹಿರೇಕೆರೂರ 21, ರಾಣೆಬೆನ್ನೂರ 29 ಹಾಗೂ ಇತರೆ 02 ಪ್ರಕರಣಗಳು ಪತ್ತೆಯಾಗಿವೆ. ಬುಧವಾರ ಮೂವರು ಮರಣ ಹೊಂದಿದ್ದು, ಮೃತರ ಸಂಖ್ಯೆ 115 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಈವರೆಗೆ 4,637 ಪ್ರಕರಣಗಳು ಪತ್ತೆಯಾಗಿದ್ದು, 3,161 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,361 ಸಕ್ರಿಯ ಪ್ರಕರಣಗಳು ಇವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.