ಹಾವೇರಿ: ಆಶಾ ಕಾರ್ಯಕರ್ತೆ, ಅಂಚೆ ಕಚೇರಿ ಸಿಬ್ಬಂದಿ ಸೇರಿ 96 ಮಂದಿಗೆ ಸೋಂಕು ದೃಢ

Share

ಹಾವೇರಿ: ಆಶಾ ಕಾರ್ಯಕರ್ತೆ, ಅಂಚೆ ಕಚೇರಿ ಸಿಬ್ಬಂದಿ ಸೇರಿದಂತೆ ಜಿಲ್ಲೆಯಲ್ಲಿ ಗುರುವಾರ 96 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. 195 ಸೋಂಕಿತರು ಗುಣಮುಖ ರಾಗಿ ಬಿಡುಗಡೆಯಾಗಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 2153 ಕೋವಿಡ್-19 ಪ್ರಕರಣಗಳು ದೃಢಗೊಂಡಿವೆ. ಒಟ್ಟು 1474 ಮಂದಿ ಸೋಂಕಿನಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ದ್ದಾರೆ. ಒಟ್ಟು 46 ಮಂದಿ ಮೃತಪಟ್ಟಿದ್ದು, 633 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ.

ಗುರುವಾರ ದೃಢಗೊಂಡ ಪ್ರಕರಣ ಪೈಕಿ ಹಾವೇರಿ 39, ರಾಣೆಬೆನ್ನೂರ 21, ಬ್ಯಾಡಗಿ 07, ಹಿರೇಕೆರೂರ 09, ಹಾನಗಲ್ 05, ಶಿಗ್ಗಾವಿ 06, ಸವಣೂರು 09 ಮಂದಿಗೆ ಸೋಂಕು ದೃಢಪಟ್ಟಿದೆ.