ಹಾವೇರಿ: ತಾಪಂ ಎಇಒ ಸೇರಿ 132 ಮಂದಿಗೆ ಸೋಂಕು

ಸಾಂದರ್ಭಿಕ ಚಿತ್ರ

Share

ಹಾವೇರಿ: ಶುಶ್ರೂಷಕಿಯರು, ತಾಲ್ಲೂಕು ಪಂಚಾಯತಿ ಎಇಒ ಸೇರಿದಂತೆ ಜಿಲ್ಲೆಯಲ್ಲಿ ಬುಧವಾರ 132 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. 42 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 2057 ಕೋವಿಡ್-19 ಪ್ರಕರಣಗಳು ದೃಢಗೊಂಡಿವೆ. ಒಟ್ಟು 1279 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 43 ಮಂದಿ ಮೃತಪಟ್ಟಿದ್ದು, 735 ಪ್ರಕರಣಗಳು ಸಕ್ರಿಯವಾಗಿವೆ.

ಬುಧವಾರ ದೃಢಗೊಂಡ ಪ್ರಕರಣ ಪೈಕಿ ಹಾವೇರಿ 38, ರಾಣೆಬೆನ್ನೂರ 30, ಬ್ಯಾಡಗಿ 23, ಹಿರೇಕೆರೂರ 19, ಹಾನಗಲ್ 13, ಶಿಗ್ಗಾವಿ 08, ಸವಣೂರು 01 ಮಂದಿಗೆ ಸೋಂಕು ದೃಢಪಟ್ಟಿದೆ.