ಹೊಲಿಗೆ ಯಂತ್ರ ಸಹಾಯಧನ ಪಡೆಯಲು ಮಹಿಳೆಯರಿಂದ ಅರ್ಜಿ ಆಹ್ವಾನ

Share

ಹಾವೇರಿ: ಕೈಮಗ್ಗ ಮತ್ತು ಜವಳಿ ಇಲಾಖೆಯ ನೂತನ ಜವಳಿ ನೀತಿ ಯೋಜನೆಯಡಿ ಸೀವಿಂಗ್ ಮಷಿನ್ ಆಪರೇಟರ್ ತರಬೇತಿ ಪಡೆದ ಗ್ರಾಮೀಣ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು 30 ಸಾವಿರ ರೂ. ಘಟಕ ವೆಚ್ಚದಲ್ಲಿ ಒಂದು ಇಂಡಸ್ಟ್ರಿಯಲ್ ಹೊಲಿಗೆ ಯಂತ್ರ ಖರೀದಿಸಲು ಯೋಜನೆಯಡಿ ಶೇ.50 ರಷ್ಟು ಸಹಾಯಧನ ಒದಗಿಸಲು ಪ್ರಸ್ತಾವನೆ ಆಹ್ವಾನಿಸಲಾಗಿದೆ.


ಅಭ್ಯರ್ಥಿಯು ಸ್ವಂತ, ಬಾಡಿಗೆ, ಲೀಸ್ ಮನೆ ಹೊಂದಿರಬೇಕು. ಹೊಲಿಗೆ ಯಂತ್ರ ಅಳವಡಿಸಲು ಅವಶ್ಯವಿರುವ ವಿದ್ಯುತ್ ಸಂಪರ್ಕ ಹೊಂದಿರಬೇಕು ಹಾಗೂ ಇಂಡಸ್ಟ್ರಿಯಲ್ ಹೊಲಿಗೆ ಯಂತ್ರವನ್ನು ಖರೀದಿಸಲು ಅವಶ್ಯವಿರುವ ಮೊತ್ತವನ್ನು ಬ್ಯಾಂಕ್, ಹಣಕಾಸು ಸಂಸ್ಥೆಯಿಂದ ಸಾಲ ಪಡೆದು ಅಥವಾ ಸ್ವಂತ ಬಂಡವಾಳದೊಂದಿಗೆ ಅನುಷ್ಠಾನಗೊಳಿಸುವುದು, ಘಟಕ ಸ್ಥಾಪಿಸಿದ ನಂತರ ಸರಕಾರದ ಸಹಾಯಧನಕ್ಕೆ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಬೇಕು.


ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಹಾವೇರಿ(ದೇವಗಿರಿ) ದೂರವಾಣಿ ಸಂ:08375-249050 ಸಂಪರ್ಕಿಸಬಹುದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.