ಬ್ರೈಲ್ ಕೈಗಡಿಯಾರ ವಿತರಣೆ

Share

ಹಾವೇರಿ: ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಕೈಗಡಿಯಾರವನ್ನು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ವಿತರಿಸಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಇಲಾಖೆ ವತಿಯಿಂದ ಅಂಧ ಮಕ್ಕಳ ಕಲ್ಯಾಣ ನಿಧಿಯಿಂದ ಇಬ್ಬರು ವಿದ್ಯಾರ್ಥಿನಿಯರಿಗೆ ಬ್ರೈಲ್ ಲಿಪಿ ಕೈಗಡಿಯಾರ ವಿತರಿಸಿದರು. ಬ್ರೈಲ್ ಕೈಗಡಿಯಾರ ಪಡೆದ ವಿದ್ಯಾರ್ಥಿಗಳಾದ ಕರ್ಜಗಿಯ ದ್ಯಾಮವ್ವ ಪವಾಡೆಪ್ಪನವರ ಹಾಗೂ ರಂಜಿರಾ ಪವಾಡೆಪ್ಪನವರ ಹಾಗೂ ವಿಕಲಚೇತನರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ ಉಪಸ್ಥಿತರಿದ್ದರು.