‘ದೋಸ್ತಿ’ ಸರಕಾರ ಪತನ : ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

Share

ಹಾವೇರಿ: ರಾಜ್ಯ ಸಮ್ಮಿಶ್ರ ಸರಕಾರ ವಿಶ್ವಾಸ‌ ಮತಯಾಚನೆಯಲ್ಲಿ ವಿಫಲಗೊಂಡು ಪತನವಾದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಸಜ್ಜನ್ ಇಂದು ರಾಜ್ಯದ ಕರಾಳ ದಿನ ಅಗತ್ಯವಾಗಿದ್ದು, ಕಳೆದ ಹದಿನಾಲ್ಕು ತಿಂಗಳಿಂದ ರಾಜ್ಯ ಸಮ್ಮಿಶ್ರ ಸರಕಾರ ರಾಜ್ಯದ ಅಭಿವೃದ್ಧಿಯನ್ನು ಕುಂಠಿತ ಮಾಡಿ, ಸ್ವಜನ ಪಕ್ಷಪಾತದಲ್ಲಿ ತೊಡಗಿತ್ತು ಎಂದು ಆರೋಪಿಸಿದರು.

ಬೃಹತ್ ಪ್ರಮಾಣದಲ್ಲಿ ವರ್ಗಾವಣೆ ದಂಧೆಯನ್ನು ತೊಡಗಿದ್ದ ಸಮ್ಮಿಶ್ರ ಸರಕಾರ ಮಂಗಳವಾರ ಬಹುಮತ ಕಳೆದುಕೊಳ್ಳುವುದರ ಮೂಲಕ ತನ್ನ ಕರಾಳ ಆಡಳಿತವನ್ನು ಅಂತ್ಯಗೊಳಿಸಿದೆ. ಬಹುಮತ ಪಡೆದಿರುವ ಬಿಜೆಪಿ ಪಕ್ಷ ಕೆಲವೇ ದಿನಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಮುಂಬರುವ ದಿನಗಳಲ್ಲಿ ಬಿಜೆಪಿ ನೇತೃತ್ವದಲ್ಲಿ ರಾಜ್ಯ ರಾಮ ರಾಜ್ಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಪಂ ಸದಸ್ಯ ಸಿದ್ದರಾಜ ಕಲಕೋಟಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ನಿರಂಜನ ಹೆರೂರ, ಡಾ ಸಂತೋಷ ಆಲದಕಟ್ಟಿ, ಪ್ರಭು ಹಿಟ್ನಳ್ಳಿ, ಸತೀಶ ತಿಮ್ಮಣ್ಣನವರ, ವಿವೇಕಾನಂದ, ಪ್ರಕಾಶ ಉಜನಿಕೊಪ್ಪ, ರುದ್ರೇಶ್ ಚಿನ್ನಣ್ಣವರ್, ಸುರೇಶ್ ಹೊಸಮನಿ, ತಿರುಕಪ್ಪ, ವೆಂಕಟೇಶ ದೈವಜ್ಞ, ವಿಜಯಕುಮಾರ್ ಚಿನ್ನಿಕಟ್ಟಿ, ಬಸವರಾಜ ಹಾಲಪ್ಪನವರ ಸೇರಿದಂತೆ ಇತರೆ ಬಿಜೆಪಿ ಕಾರ್ಯಕರ್ತರು ಇದ್ದರು.