ಕೂಡಿಟ್ಟ ಹಣ ಕೊರೋನಾ ಪರಿಹಾರ ನಿಧಿಗೆ ನೀಡಿದ ವಿದ್ಯಾರ್ಥಿಗಳು

Share

ಹಾವೇರಿ: ಜಿಲ್ಲೆಯ ಮೂವರು ಮಕ್ಕಳು ತಾವು ಹುಂಡಿಯಲ್ಲಿ ಕಳೆದ ಮೂರು ವರ್ಷಗಳಿಂದ ಕೂಡಿಟ್ಟಿದ್ದ 25 ಸಾವಿರ ರೂಪಾಯಿಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಮಂಗಳವಾರ ಜಿಲ್ಲಾಧಿಕಾರಿ ಕೃಷ್ಣ ವಾಜಪೇಯಿ ಮೂಲಕ ನೀಡಿದ್ದಾರೆ.

ನಗರದ ಕಾಂಗ್ರೆಸ್ ಮುಖಂಡ ಬಸವರಾಜ ಬಳ್ಳಾರಿ ಅವರ ಪುತ್ರಿಯರಾದ ಅವನಿ ಹಾಗೂ ಸನ್ನಿಧಿ ಬಳ್ಳಾರಿ, ನಗರಸಭಾ ಸದಸ್ಯ ಸಂಜೀವಕುಮಾರ ನೀರಲಗಿ ಪುತ್ರಿ ದೀಪ್ತಿ ಪಾಟೀಲ ಈ ಮೂವರು ತಮ್ಮ ಪಾಲಕರ ನೆರವಿನೊಂದಿಗೆ ಡಿಡಿ ಮೂಲಕ ಜಿಲ್ಲಾಧಿಕಾರಿಗಳಿಗೆ ಹಣ ತಲುಪಿಸಿದ್ದಾರೆ.

ಕೈ ಮುಗಿದು ಧನ್ಯವಾದ ಹೇಳಿದ ಡಿಸಿ: ಮಕ್ಕಳು ಡಿಡಿ ಕೊಟ್ಟು ಕೈ ಮುಗಿದು ‘ಈ ಹಣವನ್ನು ಕೊರೋನಾ ವೈರಸ್ ವಿರುದ್ಧ ಹೋರಾಡಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎಂದಾಗ ಭಾವುಕರಾದ ಜಿಲ್ಲಾಧಿಕಾರಿ ಕೃಷ್ಣ ವಾಜಪೇಯಿ ಮಕ್ಕಳಿಗೆ ಕೈಮುಗಿದು ಮಕ್ಕಳ ನಿಸ್ವಾರ್ಥತೆಯನ್ನು ಶ್ಲಾಘಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಟ್ವಿಟ್: ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಜನರಲ್ಲಿ ವ್ಯಕ್ತಿಗತ ಅಂತರದ ಜಾಗೃತಿ ಮೂಡಿಸುವ ಮೂಲಕ ನಿಜವಾದ ಸಾಮಾಜಿಕ ಜವಾಬ್ದಾರಿ ಮೆರೆದ ಈ ಚಿಣ್ಣರ ನಡೆ ಪ್ರಶಂಸಾರ್ಹವಾದದ್ದು.ಈ ಚಿಣ್ಣರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಕೋರಿದ್ದಾರೆ.